ಕರ್ನಾಟಕ

karnataka

ETV Bharat / state

ಭೂಗತ ಪಾತಕಿ ರವಿ ಪೂಜಾರಿ ಮಾ. 19ರವರೆಗೆ ಪೊಲೀಸ್​​​ ವಶಕ್ಕೆ - Underworld gangster Ravi Poojary is police custody,

ಭೂಗತ ಪಾತಕಿ ರವಿ ಪೂಜಾರಿಯನ್ನು ಮಾರ್ಚ್​ 19ರವರೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ.

Underworld gangster Ravi Poojary, Underworld gangster Ravi Poojary is police custody, Underworld gangster Ravi Poojary is police custody news, ಭೂಗತ ಪಾತಕಿ ರವಿ ಪೂಜಾರಿ, ಭೂಗತ ಪಾತಕಿ ರವಿ ಪೂಜಾರಿ ಪೊಲೀಸ್​ ಕಸ್ಟಡಿ, ಭೂಗತ ಪಾತಕಿ ರವಿ ಪೂಜಾರಿ ಪೊಲೀಸ್​ ಕಸ್ಟಡಿ ಸುದ್ದಿ,
ಸಂಗ್ರಹ ಚಿತ್ರ

By

Published : Mar 7, 2020, 9:00 PM IST

ಬೆಂಗಳೂರು: ಕೊಲೆ ಪ್ರಕರಣವೊಂದರ ಸಂಬಂಧ ಹೆಚ್ಚಿನ ತನಿಖೆ ನಡೆಸಲು ಭೂಗತ ಪಾತಕಿ ರವಿ ಪೂಜಾರಿಯನ್ನು ನಗರದ 30ನೇ ಎಸಿಎಂಎಂ ಕೋರ್ಟ್ ವೈಯಾಲಿ ಕಾವಲ್ ಪೊಲೀಸರ ವಶಕ್ಕೆ ನೀಡಿದೆ.

2001ರ ಜನವರಿಯಲ್ಲಿ ಶ್ರೀನಿವಾಸ ಎಂಟರ್‌ಪ್ರೈಸಸ್​​ ರಿಯಲ್ ಎಸ್ಟೇಟ್ ಉದ್ಯಮಿ ಸುಬ್ಬರಾಜು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗೆ ಒಳಪಡಿಸಲು ರವಿ ಪೂಜಾರಿಯನ್ನು ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿಯನ್ನು ಮಾ. 19ರವರೆಗೆ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ.

ವೈಯಾಲಿ ಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದ ಸುಬ್ಬರಾಜು ಕಚೇರಿಗೆ ನುಗ್ಗಿದ್ದ ಇಬ್ಬರು ಅಪರಿಚಿತರು ಪಿಸ್ತೂಲ್​ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಾನ್ ಮುತ್ತಪ್ಪ ರೈ ಸೇರಿದಂತೆ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಘಟನೆ ಬಳಿಕ ರವಿ ಪೂಜಾರಿ ಮತ್ತವನ ಬಂಟ ತಲೆಮರೆಸಿಕೊಂಡಿದ್ದರು. ವಿಚಾರಣೆ ಹಂತದಲ್ಲಿ ಮುತ್ತಪ್ಪ ರೈ ಸೇರಿದಂತೆ ಐವರು ಖುಲಾಸೆಗೊಂಡಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ರವಿ ಪೂಜಾರಿಯನ್ನು ವಶಕ್ಕೆ ಪಡೆಯಲಾಗಿದೆ.

ABOUT THE AUTHOR

...view details