ಕರ್ನಾಟಕ

karnataka

ETV Bharat / state

'ಸಂವಿಧಾನದ ಮೂಲ ಉದ್ದೇಶಕ್ಕೆ ಪೆಟ್ಟು, ಸಂಘರ್ಷ ಅನಿವಾರ್ಯ': ಅಂಬೇಡ್ಕರ್​ ಮೊಮ್ಮಗಳು ರಮಾಬಾಯಿ

ಸಂವಿಧಾನದ ಒಂದೊಂದು ಭಾಗವನ್ನು ಕದಿಯತ್ತಿದ್ದು ಸವಲತ್ತುಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ರಮಾಬಾಯಿ ಆನಂದ್​ ತೇಲ್ತುಂಬ್ಡೆ ಆತಂಕ ವ್ಯಕ್ತಪಡಿಸಿದರು.

Granddaughter of Dr. B.R. Ambedkar Ramabai Anand Theltumbde
ಡಾ.ಬಿ.ಆರ್​.ಅಂಬೇಡ್ಕರ್​ ಮೊಮ್ಮೊಗಳು ರಮಾಬಾಯಿ ಆನಂದ್​ ತೇಲ್ತುಂಬ್ಡೆ

By

Published : Dec 6, 2022, 7:51 PM IST

ಬೆಂಗಳೂರು:ಸಂವಿಧಾನವನ್ನು ಸಮಾಜದಲ್ಲಿ ಸಮಾನತೆ ಕಾಣುವುದಕ್ಕಾಗಿ ರಚನೆ ಮಾಡಲಾಗಿದೆ. ಆದರೆ ಸಂವಿಧಾನದ ಒಂದೊಂದು ಭಾಗವನ್ನೇ ಕದಿಯುತ್ತಿದ್ದು ಸವಲತ್ತುಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಡಾ.ಬಿ.ಆರ್​.ಅಂಬೇಡ್ಕರ್​ ಅವರ ಮೊಮ್ಮೊಗಳಾದ ರಮಾಬಾಯಿ ಆನಂದ್​ ತೇಲ್ತುಂಬ್ಡೆ ಕಳವಳ ವ್ಯಕ್ತಪಡಿಸಿದರು. ಐಕ್ಯ ಹೋರಾಟ ಚಾಲನಾ ಸಮಿತಿ ನಗರದ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತ ಸಂಘಟನೆಗಳ ಬೃಹತ್​ ಐಕ್ಯತಾ ಸಮಾವೇಶ, ದಲಿತರ ಸಾಂಸ್ಕ್ಕೃ ತಿಕ ಪ್ರತಿರೋಧ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಲಿತರು, ಮಹಿಳೆಯರು ಮತ್ತು ತುಳಿತಕ್ಕೆ ಒಳಗಾದವರಿಗಾಗಿ ಸಂವಿಧಾನವನ್ನು ರಚನೆ ಮಾಡಲಾಗಿದ್ದು ಅದರ ಮೂಲ ಉದ್ದೇಶಕ್ಕೆ ಪೆಟ್ಟಾಗುತ್ತಿದೆ. ಹೀಗಾಗಿ ಸಮಾಜದಲ್ಲಿ ಗೊಂದಲಗಳಿಗೆ ಕಾರಣವಾಗುತ್ತಿದ್ದು, ಸಂಘರ್ಷದ ಹಾದಿ ತುಳಿಯಬೇಕಾಗಿದೆ ಎಂದರು. ಇದಕ್ಕಾಗಿ ನಾಯಕರನ್ನು ಆಯ್ಕೆ ಮಾಡಿಕೊಂಡು ಸಂಘಟನೆ ಕಟ್ಟಬೇಕು. ಆ ಮೂಲಕ ಸಂಘರ್ಷ ಮಾಡಿ ಹೋರಾಟಕ್ಕೆ ಮುಂದಾಗಬೇಕು ಎಂದು ಹೇಳಿದರು.

ಇದನ್ನೂ ಓದಿ:ಸಂವಿಧಾನ ಬದಲಾವಣೆಯಾಗಬೇಕು: ಶಾಸಕ ಅಮರೇಗೌಡ ಬಯ್ಯಾಪುರ

ABOUT THE AUTHOR

...view details