ಕರ್ನಾಟಕ

karnataka

ಜೈಲು ಹಕ್ಕಿಗಳಿಗೆ ಮಾಸ್ಕ್,ಸ್ಯಾನಿಟೈಸರ್ ಇಲ್ಲ: ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಆತಂಕ

ಜೈಲಿನ ಕಿರಿದಾದ ಜಾಗದಲ್ಲಿ ನೂರಾರು ಮಂದಿ ವಿಚಾರಣಾಧೀನ ಕೈದಿಗಳನ್ನು ಬಿಡಲಾಗಿದೆ. ನಿತ್ಯ ಕೈದಿಗಳಲ್ಲಿ ಕೆಲವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ. ಅಲ್ಲಿ ಇವರಿಗೆ ಸೋಂಕು ತಗುಲಿದರೆ ದೊಡ್ಡ ಅನಾಹುತವೇ ಆಗಲಿದೆ ಅನ್ನೋದು ಕೈದಿಗಳು ಆತಂಕ.

By

Published : Mar 30, 2020, 7:12 PM IST

Published : Mar 30, 2020, 7:12 PM IST

masks
ಜೈಲು ಹಕ್ಕಿಗಳಿಗೆ ಮಾಸ್ಕ್,ಸ್ಯಾನಿಟೈಸರ್ ಇಲ್ಲ: ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಆತಂಕ

ಬೆಂಗಳೂರು:ಕೊರೊನಾ ವೈರಸ್ ಭೀತಿಯಿಂದಾಗಿ ರಾಜ್ಯದ ಎಲ್ಲ ಜೈಲುಗಳಲ್ಲಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶಿಸಿದೆ. ಆದರೆ, ನಗರದ ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ಸಾಮಾಜಿಕ‌ ಅಂತರ ಕಾಪಾಡಿಕೊಳ್ಳದೆ ಮತ್ತು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸಿರುವ ಆರೋಪವಿದೆ.

ಕೊರೊನಾ ಹರಡುವಿಕೆ ತಡೆಯಲು ಇಡೀ ದೇಶವೇ ಸ್ತಬ್ಧವಾಗಿದೆ. ನಗರದಲ್ಲಿ ಅಗತ್ಯ ವಸ್ತುಗಳ‌ ನೆಪದಲ್ಲಿ ಜನರು ಮನೆಯಿಂದ ಹೊರಬರುತ್ತಲೇ ಇದ್ದಾರೆ. ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸಪಡಬೇಕಿದೆ. ಈ ನಡುವೆ ಮಹಾಮಾರಿಯ ಸೋಂಕು ಜೈಲು ಹಕ್ಕಿಗಳಿಗೆ ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡರೂ ಜೈಲಾಧಿಕಾರಿಗಳು ಜೈಲಿಗೆ ಬಂದ ಆರೋಪಿಗಳಿಗೆ ಮಾಸ್ಕ್ ವಿತರಿಸದೇ ಸುರಕ್ಷಿತ ಕ್ರ‌ಮ ಅನುಸರಿಸಿಲ್ಲ‌ ಎಂಬ ಆರೋಪ ಸಹ ಕೈದಿಗಳದ್ದಾಗಿದೆ.

ಜೈಲಿನ ಕಿರಿದಾದ ಜಾಗದಲ್ಲಿ ನೂರಾರು ಮಂದಿ ವಿಚಾರಣಾಧೀನ ಕೈದಿಗಳನ್ನು ಬಿಡಲಾಗಿದೆ. ನಿತ್ಯ ಕೈದಿಗಳಲ್ಲಿ ಕೆಲವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ. ಅಲ್ಲಿ ಇವರಿಗೆ ಸೋಂಕು ತಗುಲಿದರೆ ದೊಡ್ಡ ಅನಾಹುತವೇ ಆಗಲಿದೆ ಅನ್ನೋದು ಕೈದಿಗಳು ಆತಂಕ. ಈ ವಿಚಾರವನ್ನು ಪ್ರಶ್ನಿಸಿದರೆ ಜೈಲಾಧಿಕಾರಿಗಳು ನಮ್ಮ‌ ಮೇಲೆಯೇ ತಿರುಗಿ ಬೀಳುತ್ತಿದ್ದಾರೆ ಎಂದು ಕೈದಿಗೆಳು ಅಳಲು ತೋಡಿಕೊಳ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ABOUT THE AUTHOR

...view details