ಕರ್ನಾಟಕ

karnataka

By ETV Bharat Karnataka Team

Published : Nov 3, 2023, 6:06 PM IST

ETV Bharat / state

ಬೆಂಗಳೂರು ಹೊರ ವರ್ತುಲ ರಸ್ತೆಯಲ್ಲಿ ಅನಧಿಕೃತ ಓಎಫ್​ಸಿ ಕೇಬಲ್‌ ತೆರವು...

ಬೆಂಗಳೂರಿನಲ್ಲಿ ಓಎಫ್ ಸಿ ಕೇಬಲ್​ಗಳ ತೆರವು ಕಾರ್ಯಾಚರಣೆಯನ್ನು ಮೂರು ದಿನಕಾಲ ಹಮ್ಮಿಕೊಳ್ಳಲಾಗಿದೆ.

OFC cables clearance operation
ಅನಧಿಕೃತ ಓಎಫ್​ಸಿ ಕೇಬಲ್‌ ತೆರವು

ಬೆಂಗಳೂರು:ನಗರದಬಿಬಿಎಂಪಿ ವ್ಯಾಪ್ತಿ ಮಹದೇವಪುರ ವಲಯ ವ್ಯಾಪ್ತಿಯ ಹೊರವರ್ತುಲ ರಸ್ತೆಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಓ ಎಫ್ ಸಿ ಕೇಬಲ್‌ಗಳ ತೆರವು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಓ ಎಫ್ ಸಿ ಕೇಬಲ್​ಗಳ ತೆರವು ಕಾರ್ಯಾಚರಣೆ ಕೈಗೊಳ್ಳಲು ಮುಖ್ಯಆಯುಕ್ತ ತುಷಾರ್ ಗಿರಿನಾಥ್ ಅವರು ಸೂಚನೆ ನೀಡಿರುವ ಬೆನ್ನಲ್ಲೇ ವಲಯ ಆಯುಕ್ತರು ಹಾಗೂ ವಲಯ ಜಂಟಿ ಆಯುಕ್ತರ ನೇತೃತ್ವದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಓಎಫ್ ಸಿ ಕೇಬಲ್​ಗಳ ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ.

ಮಹದೇವಪುರ ವಲಯದ ಹೊರ ವರ್ತುಲ ರಸ್ತೆಯ ಇಬ್ಬಲೂರು ಜಂಕ್ಷನ್​ನಿಂದ ಲೌರಿ ಜಂಕ್ಷನ್ ಹಾಗೂ ಲೌರಿ ಜಂಕ್ಷನನಿಂದ ಕಾಡುಗೋಡಿಯವರೆಗೆ ಅನಧಿಕೃತವಾಗಿ ಅಳವಡಿಸಿರುವ ಓಎಫ್‌ಸಿ ಕೇಬಲ್‌ಗಳ ತೆರವು ಮಾಡಲಾಯಿತು.

ಈ ಪೈಕಿ ತೆರವು ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ವಿದ್ಯುತ್ ಕಂಬಗಳ ಮೇಲೆ ಜೋತಾಡುತ್ತಿರುವ, ಪಾದಚಾರಿ ಮಾರ್ಗಗಳಲ್ಲಿ ಅಳವಡಿಸಿದ್ದ, ಮೇಲುಸೇತುವೆಗಳ ಮೇಲೆ ಹಾಗೂ ಮರಗಳಿಗೆ ಸುತ್ತಿದ್ದ ಕೇಬಲ್‌ಗಳನ್ನು ತೆರವುಗೊಳಿಸಲಾಯಿತು.

ವಿದ್ಯುತ್ ವಿಭಾಗದ 10 ಕ್ಕೂ ಹೆಚ್ಚು ತಂಡ ನಿಯೋಜನೆ:ಅನಧಿಕೃತ ಓ ಎಫ್ ಸಿ ಕೇಬಲ್ ತೆರವು ಕಾರ್ಯಾಚರಣೆಯಲ್ಲಿ ವಿದ್ಯುತ್ ವಿಭಾಗದ 10 ಕ್ಕೂ ಹೆಚ್ಚು ತಂಡಗಳನ್ನು ನಿಯೋಜಿಸಲಾಗಿದೆ. ವಿದ್ಯುತ್ ವಾಹನದ ಲ್ಯಾಡರ್ ಹಾಗೂ ಸಿಬ್ಬಂದಿಗಳ ಸಹಯೋಗದಲ್ಲಿ ಅನಧಿಕೃತ ಕೇಬಲ್ ಗಳನ್ನು ಕತ್ತರಿಸಿ ತೆರವುಗೊಳಿಸಲಾಗುತ್ತಿದೆ. ಕತ್ತರಿಸಿರುವ ಕೇಬಲ್‌ಗಳನ್ನು ಟ್ರ್ಯಾಕ್ಟರ್ ಗಳ ಮೂಲಕ ತುಂಬಿಕೊಂಡು ಒಂದೆಡೆ ಶೇಖರಿಸಲಾಗುತ್ತಿದೆ. ಒಟ್ಟು 10 ಕಿ.ಮೀ ವ್ಯಾಪ್ತಿ 14 ಟ್ರ್ಯಾಕ್ಟರ್ ಲೋಡ್ ತೆರವು ಮಾಡಲಾಗಿದೆ.

ಸಾರ್ವಜನಿಕರ ಸುರಕ್ಷತೆ ಮತ್ತು ವಾಹನ ಸವಾರರ ಸಂಚಾರಕ್ಕೆ ಯಾವುದೇ ತೊಂದರೆಯಾಗದಿರಲು ಅನಧಿಕೃತ ಒ ಎಫ್ ಸಿ ತೆರವುಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನಧಿಕೃತ ಕೇಬಲ್‌ಗಳನ್ನು ಅಳವಡಿಸಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಅನಧಿಕೃತ ಕೇಬಲ್ ತೆರವು ಕಾರ್ಯಾಚರಣೆಗೆ ಸಂಚಾರ ಪೊಲೀಸ್ ವಿಭಾಗ ಹಾಗೂ ಸಾರ್ವಜನಿಕರು ಸಹಕರಿಸುವಂತೆ ವಲಯ ಜಂಟಿ ಆಯುಕ್ತರಾದ ಡಾ.ಕೆ.ದಾಕ್ಷಾಯಿಣಿ ಹೇಳಿದ್ದಾರೆ.

ಇದನ್ನೂಓದಿ:ಖಿನ್ನತೆಗೊಳಗಾದ ಕೆಪಿಟಿಸಿಎಲ್ ನೌಕರನನ್ನು ಮರುನೇಮಕ ಮಾಡಿಕೊಳ್ಳುವಂತೆ ಹೈಕೋರ್ಟ್ ಆದೇಶ

324 ಕೋಟಿ ಬರಪರಿಹಾರ ಬಿಡುಗಡೆ: ರೈತ ಸಂಘಟನೆಗಳ ಆಗ್ರಹವನ್ನು ಪರಿಗಣಿಸಿರುವ ಸರ್ಕಾರ ರಾಜ್ಯದ ರೈತರಿಗೆ ಗುಡ್​​ ನ್ಯೂಸ್​ ಕೊಟ್ಟಿದೆ. 31 ಜಿಲ್ಲೆಗಳ ಬೆಳೆ ನಷ್ಟ ಆಧರಿಸಿ 2023-24 ನೇ ಸಾಲಿನ ಬರ ಪರಿಹಾರಕ್ಕಾಗಿ ಎಸ್‌ಡಿಆರ್​ಎಫ್ ಅಡಿ ಇಂದು 324 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.

ಮುಂಗಾರು ವೈಫಲ್ಯದಿಂದ ರೈತರಿಗೆ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ. ಕೆಲವು ರೈತರು ಬೆಳೆದಿದ್ದರೂ ನೀರಿನ ಕೊರತೆಯಿಂದ ಬೆಳೆ ಒಣಗಿ ಹೋಗಿದ್ದವು. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ರೈತ ಸಂಘಟನೆಗಳು ಬೆಳೆ ಪರಿಹಾರ ಪೋಷಣೆ ಮಾಡಬೇಕೆಂದು ಒತ್ತಾಯಿಸಿದ್ದವು. ಅದರಂತೆ ರಾಜ್ಯದಲ್ಲಿನ ಮುಂಗಾರು ಹಂಗಾಮಿನ ಬರ ಪರಿಹಾರ ಕಾರ್ಯಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ ಅಡಿ 31 ಜಿಲ್ಲೆಗಳಿಗೂ 324 ಕೋಟಿ ರೂ. ಬೆಳೆ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂಓದಿ:ಬೆಳಗಾವಿಯಲ್ಲಿ ಭ್ರೂಣ ಪತ್ತೆ ಸ್ಕ್ಯಾನಿಂಗ್​ ಆರೋಪ: ಆಸ್ಪತ್ರೆ ಮೇಲೆ ಎಸಿ ನೇತೃತ್ವದಲ್ಲಿ ದಿಢೀರ್ ದಾಳಿ

ABOUT THE AUTHOR

...view details