ಬೆಂಗಳೂರು: ಬಿಬಿಎಂಪಿ ಹಾಗೂ ಹಳೆ ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಆದೇಶದ ಹಿನ್ನೆಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಹದೇವಪುರ ವಲಯದ ವಾರ್ಡ್ ನಂ.150 ಬೆಳ್ಳಂದೂರು ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಇಬ್ಬಲೂರು ಜಂಕ್ಷನ್ನಿಂದ ಕೈಕೊಂಡ್ರಹಳ್ಳಿ ವರೆಗಿನ ರಸ್ತೆಯಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಓಎಫ್ಸಿ ಕೇಬಲ್‌ಗಳನ್ನು ತೆರವುಗೊಳಿಸಲಾಗಿದೆ.
ಬಿಬಿಎಂಪಿ ಕಾರ್ಯಪಾಲ ಅಭಿಯಂತರರು ಮಹದೇವಪುರ ವಿಭಾಗ ಹಾಗೂ ವಿದ್ಯುತ್ ವಿಭಾಗ ಅವರ ನೇತೃತ್ವದಲ್ಲಿ ಓಎಫ್ಸಿ ಕೇಬಲ್ ತೆರವು ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಾಚರಣೆಯಲ್ಲಿ ಒಟ್ಟು 6 ವಾರ್ಡ್ಗಳ ಅಭಿಯಂತರರು ಹಾಗೂ ಅಧೀನದ ಸಿಬ್ಬಂದಿ ವರ್ಗದ ಸುಮಾರು 77 ಕಿಮೀ ಉದ್ದದ ಅನಧಿಕೃತ ವಿದ್ಯುತ್ ಕಂಬಗಳ ಮೇಲೆ ಹಾಕಿದ್ದ, ಮರಗಳಿಗೆ ಸುತ್ತಿದ್ದ ಹಾಗೂ ನೇತಾಡುತ್ತಿದ್ದ 6 ಟ್ರ್ಯಾಕ್ಟರ್ ಲೋಡ್ ಓಎಫ್ಸಿ ಕೇಬಲ್ ಗಳನ್ನು ತೆರವುಗೊಳಿಸಿ ಇಂದಿರಾ ಕ್ಯಾಂಟೀನ್ ಬಳಿ ಶೇಖರಿಸಿದ್ದಾರೆ.