ಬೆಂಗಳೂರು:ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡಿ ಪ್ರಾಣ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅನಧಿಕೃತ ಬಡ್ಡಿ ವ್ಯವಹಾರ: ಆರೋಪಿ ಮನೆ ಮೇಲೆ ಸಿಸಿಬಿ ದಾಳಿ - ಸಿಸಿಬಿ ದಾಳಿ
ರಾಜಧಾನಿಯಲ್ಲಿ ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡಿ ಪ್ರಾಣ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಾರಾಯಣ ಅಲಿಯಾಸ್ ಗೋಲ್ಡ್ ನಾರಾಯಣ ಬಂಧಿತ ಆರೋಪಿ. 2017ರಲ್ಲಿ ಅನಂತ ನಾರಾಯಣ ಎಂಬುವರು ನಾಗರಬಾವಿ ನಿವಾಸಿಯಾದ ಆರೋಪಿ ನಾರಾಯಣ ಅಲಿಯಾಸ್ ನಾರಾಯಣ ಗೋಲ್ಡ್ ಎಂಬಾತನ ಬಳಿಯಿಂದ 5 ಪರ್ಸೆಂಟ್ಗೆ 55 ಲಕ್ಷ ರೂಗಳನ್ನ ಬಡ್ಡಿಗೆ ಹಣವನ್ನ ಪಡೆದಿದ್ದರು. 6 ತಿಂಗಳು ಬಡ್ಡಿ ಕಟ್ಟಿದ್ದ ಇವರು ನಂತರ ಕ್ಯಾನ್ಸರ್ ಇದ್ದ ಕಾರಣ ಹಣ ಕಟ್ಟಲು ಸಾಧ್ಯವಾಗಿರಲಿಲ್ಲ. ತದ ನಂತರ ಸರಿಯಾದ ರೀತಿ ಹಣ ಪಾವತಿಸಿದ್ದರೂ ಕೂಡ ಆರೋಪಿ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿ ವಿರುದ್ಧ ಹಲವಾರು ದೂರುಗಳು ಕೇಳಿ ಬಂದ ಕಾರಣ ಆರೋಪಿಯ ಮನೆ ಮೇಲೆ ಇಂದು ಸಿಸಿಬಿ ಪೊಲೀಸರು ದಾಳಿ ನಡೆಸಿ ಜನರಿಂದ ಪಡೆದ ನಿವೇಶನ ಪತ್ರಗಳು, ಖಾಲಿ ಚೆಕ್ಗಳು ಪ್ರಾಮಿಸರಿ ನೋಟುಗಳನ್ನ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.