ಕರ್ನಾಟಕ

karnataka

ETV Bharat / state

ಕೆಲಸಕ್ಕೆ ಹಾಜರಾಗದ ಪ್ರತಿಭಟನಾ ನಿರತ ಕಾರ್ಮಿಕರು: ಬಿಡದಿಯ ಟೊಯೋಟಾ ಮತ್ತೆ ಲಾಕೌಟ್ - ಟಿಕೆಎಂ ಕಾರ್ಮಿಕ ಸಂಘ

ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಮಾಡಿ ಟಿಕೆಎಂ ಕಾರ್ಮಿಕ ಸಂಘ ನಡೆಸುತ್ತಿರುವ ಮುಷ್ಕರ 16ನೆ ದಿನಕ್ಕೆ ಕಾಲಿಟ್ಟಿದ್ದು, ಡಿಸಿಎಂ ಅಶ್ವತ್ಥ್ ನಾರಾಯಣ ಮಧ್ಯಸ್ಥಿಕೆಯೂ ವಿಫಲವಾಗಿದೆ. ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆ ಇಬ್ಬರೂ ಪಟ್ಟು ಸಡಿಲ ಮಾಡದ ಕಾರಣ ಲಾಕೌಟ್ ಘೋಷಣೆ ಮಾಡಲಾಗಿದೆ.

ಟೊಯೋಟಾ  ಲಾಕೌಟ್
ಟೊಯೋಟಾ ಲಾಕೌಟ್

By

Published : Nov 25, 2020, 3:49 AM IST

ಬೆಂಗಳೂರು: ಬಿಡದಿಯ ಟೊಯೋಟಾ ಸಂಸ್ಥೆ ಎರಡನೇ ಭಾರಿ ಲಾಕೌಟ್ ಘೋಷಣೆ ಮಾಡಿದ್ದು, ಕಾರ್ಮಿಕರು ಕೆಲಸಕ್ಕೆ ಮರಳದ ಕಾರಣ ಈ ನಿರ್ಧಾರ ಅನಿವಾರ್ಯ ಎಂದು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಮಾಡಿ ಟಿಕೆಎಂ ಕಾರ್ಮಿಕ ಸಂಘ ನಡೆಸುತ್ತಿರುವ ಮುಷ್ಕರ 16ನೇ ದಿನಕ್ಕೆ ಕಾಲಿಟ್ಟಿದ್ದು, ಡಿಸಿಎಂ ಅಶ್ವತ್ಥ್ ನಾರಾಯಣ ಮಧ್ಯಸ್ಥಿಕೆಯೂ ವಿಫಲವಾಗಿದೆ. ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆ ಇಬ್ಬರೂ ಪಟ್ಟು ಸಡಿಲ ಮಾಡದ ಕಾರಣ ಲಾಕೌಟ್ ಘೋಷಣೆ ಮಾಡಲಾಗಿದೆ.

ನ.19ಕ್ಕೆ ಲಾಕೌಟ್ ತೆರವುಗೊಳಿಸಿ ಎಂದು ಸರ್ಕಾರ ಆದೇಶಿಸಿತ್ತು, ಆದರೆ ಕಾರ್ಖಾನೆಯಲ್ಲಿ ಉಸಿರುಗಟ್ಟುವ ವಾತಾವರಣ ದೂರ ಮಾಡಬೇಕು ಹಾಗೂ 40 ಕಾರ್ಮಿಕರ ಅಮಾನತ್ತು ಆದೇಶ ಹಿಂಪಡೆಯಬೇಕು ಎಂಬ ಸಂಘಟನೆಯ ಬೇಡಿಕೆ ಈಡೇರಿಲ್ಲ. ಹೀಗಾಗಿ ರೈತ ಸಂಘ ಹಾಗೂ ಇನ್ನಿತರೆ ರಾಜ್ಯದ ಕಾರ್ಮಿಕ ಸಂಘಟನೆಗಳು ಬೆಂಬಲದಿಂದ ನಡೆಯುತ್ತಿರುವ ಮುಷ್ಕರ ನಿಂತಿಲ್ಲ.

160 ಬಸ್​ಗಳು ಖಾಲಿಯಾಗಿ ಸಂಚಾರ ಮಾಡುತ್ತಿವೆ, ಕಾರ್ಮಿಕರು ಪಾಳಿಯ ಪ್ರಕಾರ ಕೆಲಸಕ್ಕೆ ಹಾಜರಾಗುತ್ತಿಲ್ಲ. ಸಂಸ್ಥೆಯ ವಿರುದ್ಧದ ಮುಷ್ಕರದಲ್ಲಿ ಇವರು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಲಾಕೌಟ್ ಮಾಡದೆ ಬೇರೆ ದಾರಿಯಿಲ್ಲ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ABOUT THE AUTHOR

...view details