ಕರ್ನಾಟಕ

karnataka

ETV Bharat / state

ಹಲಸೂರು ಕೆರೆ ಸ್ವಚ್ಛತಾ ಅಭಿಯಾನ: ವಾರದಲ್ಲಿ 30 ಲೋಡ್ ತ್ಯಾಜ್ಯ ತೆರವು - Madras Engineer Group ulsoor lake clean

ಕಳೆದ ಸಾಲಿನಂತೆ ಈ ಬಾರಿಯೂ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್​ನ ಯೋಧರು ಕೆರೆಯ ಕಳೆ ಕಿತ್ತು ಸ್ವಚ್ಛತಾ ಅಭಿಯಾನದಲ್ಲಿ ತೊಡಗಿದ್ದಾರೆ. ನಿನ್ನೆಯ ಅಭಿಯಾನದಲ್ಲಿ ಶಾಸಕ ರಿಜ್ವಾನ್ ಹರ್ಷದ್, ಆಯುಕ್ತರಾದ ಎನ್.ಮಂಜುನಾಥ್ ಪ್ರಸಾದ್, ಕಮಾಂಡೆಂಟ್ (ಎಂಇಜಿ ಮತ್ತು ಸೆಂಟರ್) ಬ್ರಿಗೇಡಿಯರ್ ಟಿಪಿಎಸ್ ವಡಾವ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ulsoor lake
ಹಲಸೂರು ಕೆರೆಯಲ್ಲಿ ಸ್ವಚ್ಛತೆ

By

Published : Dec 13, 2020, 5:36 AM IST

ಬೆಂಗಳೂರು:ಬಿಬಿಎಂಪಿ ಹಾಗೂ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಒಗ್ಗೂಡಿ ಹಲಸೂರು ಕೆರೆಯಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡಿವೆ.

ಕಳೆದ ಸಾಲಿನಂತೆ ಈ ಬಾರಿಯೂ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್​ನ ಯೋಧರು ಕೆರೆಯ ಕಳೆ ಕಿತ್ತು ಸ್ವಚ್ಛತಾ ಅಭಿಯಾನದಲ್ಲಿ ತೊಡಗಿದ್ದಾರೆ. ನಿನ್ನೆಯ ಅಭಿಯಾನದಲ್ಲಿ ಶಾಸಕ ರಿಜ್ವಾನ್ ಹರ್ಷದ್, ಆಯುಕ್ತರಾದ ಎನ್.ಮಂಜುನಾಥ್ ಪ್ರಸಾದ್, ಕಮಾಂಡೆಂಟ್ (ಎಂಇಜಿ ಮತ್ತು ಸೆಂಟರ್) ಬ್ರಿಗೇಡಿಯರ್ ಟಿಪಿಎಸ್ ವಡಾವ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

113 ಎಕರೆ ವ್ಯಾಪ್ತಿಯುಳ್ಳ ಹಲಸೂರು ಕೆರೆಯಲ್ಲಿ ಕಳೆದ ಒಂದು ವಾರದಿಂದ ಬಿಬಿಎಂಪಿ ಕೆರೆಗಳ ನಿರ್ವಹಣೆಗೆ 50 ಸಿಬ್ಬಂದಿ ಹಾಗೂ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್​ನ 50 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಬಿಎಂಪಿಯ 80 ಹಾಗೂ ಎಂಇಜಿಯ 150 ಸಿಬ್ಬಂದಿ ಸಹ ಕೈಜೋಡಿಸಿದ್ದಾರೆ.

ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿಗೆ ಕೊರೊನಾ ಅಡ್ಡಗಾಲು: ಸಂಪೂರ್ಣ ದಾಖಲಾತಿ ಕುಸಿತ..!

5 ಬೋಟ್​ಗಳ ಮೂಲಕ ಕಳೆ ತೆರವುಗೊಳಿಸಲಾಗುತ್ತಿದ್ದು, ಇದುವರೆಗೆ 25ರಿಂದ 30 ಲೋಡ್ ತ್ಯಾಜ್ಯ, ಪ್ಲಾಸ್ಟಿಕ್‌ ತೆರವು ಮಾಡಲಾಗಿದೆ. ಹಲಸೂರು ಕೆರೆ ಸ್ವಚ್ಛತಾ ಕಾರ್ಯದ ಕಾರ್ಯವೈಖರಿಯನ್ನು ಆಯುಕ್ತರು ಬೋಟ್‌ನ ಮೂಲಕ ಪರಿಶೀಲನೆ ನಡೆಸಿ ಕೆರೆಯನ್ನು ಆಕರ್ಷಣಾ ತಾಣವನ್ನಾಗಿ ಮಾಡಿರುವ ಪಾಲಿಕೆ ಸಿಬ್ಬಂದಿ ಹಾಗೂ ಎಂಇಜಿ ಗ್ರೂಫ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಹಲಸೂರು ಕೆರೆಯನ್ನು ಸಾರ್ವಜನಿಕರ ವಾಯುವಿಹಾರಕ್ಕೆ ಅನುಕೂಲಕರವಾಗುವಂತೆ ಮಾಡಲು, ಮುಂದಿನ ಆಯವ್ಯಯದಲ್ಲಿ ಅನುದಾನ ಮೀಸಲಿರಿಸಿ ಅಭಿವೃದ್ಧಿಪಡಿಸಲು ಸೂಕ್ತ ಕ್ರಮ ತೆಗದುಕೊಳ್ಳಲಾಗುತ್ತದೆ. ಇದೀಗ ಹೊಸದಾಗಿ ಕೆರೆಯ ಇನ್ ಲೆಟ್ ಬಳಿ 100 ಅಡಿಯ ಟ್ರ್ಯಾಶ್ ಬ್ಯಾರಿಯರ್ ಅಳವಡಿಸಲಾಗಿದೆ. ಇದರಿಂದ ತೇಲುವ ವಸ್ತುಗಳು ಅಲ್ಲೇ ಸಂಗ್ರಹವಾಗಲಿದ್ದು, ಕೆರೆಯೊಳಗೆ ಬರುವುದಿಲ್ಲ. ಟ್ರ್ಯಾಶ್ ಬ್ಯಾರಿಯರ್ ಬಳಿ ಸಂಗ್ರಹವಾದ ಪ್ಲಾಸ್ಟಿಕ್ ಸೇರಿದಂತೆ ಇತ್ಯಾದಿ ತ್ಯಾಜ್ಯವನ್ನು ಆಗಿಂದಾಗ್ಗೆ ತೆರವುಗೊಳಿಸಲಾಗುತ್ತದೆ ಎಂದರು.

ABOUT THE AUTHOR

...view details