ಬೆಂಗಳೂರು:ದೇಶಕ್ಕೆ ಮೋದಿ ಆಧುನಿಕ ಭಸ್ಮಾಸುರರಂತೆ ವಕ್ಕರಿಸಿದ್ದಾರೆ. ರೈತರಿಗೆ ಮಾರಕ ಕಾನೂನು ತರಲು ಹೊರಟಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಟೀಕಿಸಿದರು.
ಕಾಂಗ್ರೆಸ್ ನಾಯಕರು ನಡೆಸಿದ ಜಂಟಿ ಸುದ್ದಿಗೋಷ್ಠಿ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳ ವಿರುದ್ಧ ಒಂದು ಕೋಟಿಗೂ ಹೆಚ್ಚು ರೈತರು, 500ಕ್ಕೂ ಹೆಚ್ಚು ಸಂಘಟನೆಗಳು, ಎಲ್ಲಾ ವಿರೋಧ ಪಕ್ಷಗಳು ಸಹ ಬೀದಿಗಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ ಮೋದಿ ಪರಿಹಾರ ರೂಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಗುಡುಗಿದರು.
ಓದಿ: ನಾವು ಜೆಡಿಎಸ್ ಜತೆ ಒಳ ಒಪ್ಪಂದ ಮಾಡಿಲ್ಲ, ಅದೇನಿದ್ರೂ ಹೆಚ್‌ಡಿಕೆ-ಡಿಕೆಶಿ ಕೆಲಸ - ಸಚಿವ ಆರ್ ಅಶೋಕ್
ಸುಪ್ರೀಂಕೋರ್ಟ್ ಸಹ ರೈತರ ಹೋರಾಟದ ಬಗ್ಗೆ ಕನಿಕರ ವ್ಯಕ್ತಪಡಿಸಿ ಒಂದು ಕಮಿಟಿ ರಚನೆ ಮಾಡಿ ಸಮಸ್ಯೆ ಬಗೆಹರಿಸಿ ಎಂದು ಹೇಳಿದೆ. ಸಮಸ್ಯೆ ಬಗೆಹರಿಯುವವರೆಗೂ ಕಾನೂನು ತಡೆಹಿಡಿಯಿರಿ ಎಂದು ಮೌಖಿಕವಾಗಿ ತಿಳಿಸಿದೆ. ಆದರೆ ಕೇಂದ್ರ ಸರ್ಕಾರ ಇದಕ್ಕೂ ಬೆಲೆ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೊದಲನೇ ಸ್ವಾತಂತ್ರ ಸಂಗ್ರಮ ನಡೆದಿತ್ತು. ಈಗ ಅದಾನಿ ಮತ್ತು ಅಂಬನಿ ಕಂಪನಿಗಳ ವಿರುದ್ಧ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಮಾಡಬೇಕಿದೆ. ರೈತ ಹೋರಾಟದ ವಿಷಯದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು, ಸಮಿತಿ ರಚನೆ ಮಾಡವಂತೆ ಕೋರ್ಟ್ ಆದೇಶಿಸಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ನಿಲುವು ಏನು ಎಂದು ಪ್ರಶ್ನಿಸಿದರು.
ಈ ವೇಳೆ ಮಾಜಿ ಗೃಹ ಸಚಿವ ರಾಮಲಿಂಗ ರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಪಿ.ಆರ್ ರಮೇಶ್, ಪ್ರಕಾಶ್ ರಾಠೋಡ್ ಮೊದಲಾದವರು ಪಾಲ್ಗೊಂಡಿದ್ದರು.