ಕರ್ನಾಟಕ

karnataka

By

Published : Sep 16, 2019, 10:17 PM IST

ETV Bharat / state

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ 'ಉಗ್ರ'ಪ್ಪ

ಬೀಫ್ ರಫ್ತಿನಲ್ಲಿ ಮುಂಚೂಣಿಯಲ್ಲಿರೋದು ಭಾರತ. ಈಶ್ವರಪ್ಪಗೆ ಧಮ್ಮು ತಾಕತ್ತು ಇದ್ರೆ ದೇಶದ ಬೀಫ್ ಎಕ್ಸ್​ಪೋರ್ಟ್ ತಡೆಯಲಿ ನೋಡೋಣ. ಉಡಾಫೆ ಮಾತನಾಡೋದನ್ನು ಬಿಡಬೇಕು ಮಿಸ್ಟರ್ ಈಶ್ವರಪ್ಪ ಎಂದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ 'ಉಗ್ರ'ಪ್ಪ

ಬೆಂಗಳೂರು:ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರಿಗೆ ಮನುಷ್ಯತ್ವ ಇಲ್ಲ. ನೆರೆ ವಿಚಾರದಲ್ಲಿ ಒಂದು ರೂಪಾಯಿ ಪರಿಹಾರ ಬಿಡುಗಡೆ ಮಾಡಲಿಲ್ಲ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ 'ಉಗ್ರ'ಪ್ಪ

ಕೆಪಿಸಿಸಿ ಕಚೇರಿಯಲ್ಲಿ ಪ್ರಕಾಶ್ ರಾಥೋಡ್ ಜತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯದಲ್ಲಿ ಜನ ಕಷ್ಟದ ದಿನ ದೂಡುತ್ತಿದ್ದಾರೆ. ಈಶ್ವರಪ್ಪ, ಮಧುಸ್ವಾಮಿ, ಸವದಿ ಬಳಸಿರುವ ಪದಗಳು ಗಮನಿಸಿದರೆ ಅಧಿಕಾರದ ಮಧ ನೆತ್ತಿಗೇರಿರುವುದು ಸಾಬೀತಾಗುತ್ತದೆ. ಕಾಂಗ್ರೆಸ್ ಅವರು ನೀಲಿಚಿತ್ರ ಮಾಡ್ತಾರೆ ಅಂತ ಸವದಿ ಹೇಳಿದ್ದಾರೆ. ಯಾರು ಮಾಡುತ್ತಿದ್ದಾರೆ ಅಂತ ಬಹಿರಂಗ ಪಡಿಸಲಿ. ಒಬ್ಬ ಉನ್ನತ ಹುದ್ದೆಯಲ್ಲಿ ಇರೋರು ಮಾತು ಜಾರಬಾರದು. 24 ಗಂಟೆಯ ಒಳಗೆ ಇದನ್ನ ಸಾರ್ವಜನಿಕರ ಮುಂದೆ ಸವದಿ ಹೇಳಬೇಕು ಎಂದರು.

ರಾಜ್ಯದಲ್ಲಿ ಪ್ರವಾಹ, ಬರ ಇದೆ. ಬಿತ್ತನೆ ಬೀಜ ತೆಗೆದುಕೊಳ್ಳಲು ರೈತರ ಬಳಿ ಹಣವಿಲ್ಲ. ಸಿದ್ದರಾಮಯ್ಯ ಸಹಕಾರಿ ಬ್ಯಾಂಕುಗಳ ಸಾಲಮನ್ನ ಮಾಡಿದ್ರು. ಸಮ್ಮಿಶ್ರ ಸರ್ಕಾರ ವಾಣಿಜ್ಯ ಬ್ಯಾಂಕುಗಳ ಸಾಲಮನ್ನ ಮಾಡಿದ್ರು. ಯಡಿಯೂರಪ್ಪ ಅವರಿಗೆ ರೈತರ ಮೇಲೆ ಗೌರವ ಕಾಳಜಿ ಇದ್ರೆ ಎಲ್ಲ ರೀತಿಯ ಬ್ಯಾಂಕುಗಳ ಸಾಲಮನ್ನ ಮಾಡಲಿ. ನೆರೆ ಬರ ಇರೋ ರೈತರ ಸಾಲಮನ್ನ ಮಾಡಿ. ಪರಿಹಾರ ಕೊಡಲು ಆಗುತ್ತಿಲ್ಲ. ಸಾಲವಾದ್ರೂ ಮನ್ನಾ ಮಾಡಿ.

ಈಶ್ವರಪ್ಪಗೆ ಸವಾಲು ಹಾಕಿದ ವಿ. ಎಸ್. ಉಗ್ರಪ್ಪ, ಬೀಫ್ ರಫ್ತಿನಲ್ಲಿ ಮುಂಚೂಣಿಯಲ್ಲಿರೋದು ಭಾರತ. ಈಶ್ವರಪ್ಪಗೆ ಧಮ್ಮು ತಾಕತ್ತು ಇದ್ರೆ ದೇಶದ ಬೀಫ್ ಎಕ್ಸ್ ಪೋರ್ಟ್ ತಡೆಯಲಿ ನೋಡೋಣ. ಉಡಾಫೆ ಮಾತನಾಡೋದನ್ನು ಬಿಡಬೇಕು ಮಿಸ್ಟರ್ ಈಶ್ವರಪ್ಪ. ಸಿದ್ದರಾಮಯ್ಯ ಬಗ್ಗೆಯೂ ಉಡಾಫೆ ಮಾತನಾಡೋದನ್ನು ಈಶ್ವರಪ್ಪ ನಿಲ್ಲಿಸಬೇಕು ಎಂದರು.

ಕೇಂದ್ರ ಸರ್ಕಾರ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದೆ. ರಿಸರ್ವ್ ಬ್ಯಾಂಕ್ 1 ಲಕ್ಷ 73 ಸಾವಿರ ಕೋಟಿ ಪ್ಯಾಕೇಜ್ ನೀಡಿದೆ. ನಿನ್ನೆ 73 ಸಾವಿರ ಕೋಟಿ ಕೇಂದ್ರಕ್ಕೆ ಪ್ಯಾಕೇಜ್ ನೀಡಿದೆ. ರಾಜ್ಯ ಬರ, ನೆರೆ ಎರಡನ್ನೂ ಎದುರಿಸಿದೆ. ಈಗಿದ್ದರೂ ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸಿಲ್ಲ. ಕಾರಣ ಕೇಂದ್ರವೇ ಆರ್ಥಿಕ ಸಮಸ್ಯೆಗೆ ಗುರಿಯಾಗಿದೆ. ನೆರೆ, ಬರಕ್ಕೆ ಕೇಂದ್ರ ವಿಶೇಷ ಪ್ಯಾಕೇಜ್ ನೀಡಿಲ್ಲ. ಕೇಂದ್ರ ಸರ್ಕಾರಕ್ಕೆ ಮನುಷ್ಯತ್ವವೇ ಇಲ್ಲದಂತಾಗಿದೆ ಎಂದು ಕೇಂದ್ರದ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಉಗ್ರಪ್ಪ ವಿಷಾದ ವ್ಯಕ್ತಪಡಿಸಿದರು.

ಮುಖಂಡರ ವಿರುದ್ಧ ಕಿಡಿ
ಪ್ರಹ್ಲಾದ್ ಜೋಶಿ, ಡಿವಿಎಸ್, ಸವದಿ ಹೇಳಿಕೆಗಳು ಏನು? ಪ್ರವಾಹ ಸಂತ್ರಸ್ಥರ ಬಗ್ಗೆ ಈಶ್ವರಪ್ಪ ಹೇಳಿರುವುದೇನು? ಅವರ ಮನಸ್ಥಿತಿಯಲ್ಲೇ ಗೊತ್ತಾಗುತ್ತದೆ. ಸಂತ್ರಸ್ತರ ಬಗ್ಗೆ ಮೊದಲು ಗಮನಹರಿಸಿ. ಜಾನುವಾರುಗಳಿಗೆ ಮೊದಲು ಮೇವು ನೀಡಿ. ಸಿದ್ದರಾಮಯ್ಯ 8163 ಕೋಟಿ ಸಾಲಮನ್ನಾ ಮಾಡಿದ್ದರು. ಕುಮಾರಸ್ವಾಮಿ 1 ಲಕ್ಷದವರೆಗೆ ಸಾಲಮನ್ನಾ ಮಾಡಿದ್ದಾರೆ. ಈಗ ನಿಮಗೆ ಕಾಳಜಿಯಿದ್ದರೆ ಸಾಲಮನ್ನಾ ಮಾಡಿ. ರಾಜ್ಯದ ಬರ, ನೆರೆ ಸಂತ್ರಸ್ತರ ಎಲ್ಲಾ ಸಾಲ ಮನ್ನಾ ಮಾಡಿ ಎಂದರು.

ಹಿಂದಿ ಹೇರಿಕೆ ಬಗ್ಗೆ ಅಮಿತ್ ಶಾ ಹೇಳಿಕೆ ವಿಚಾರ ಮಾತನಾಡಿ, ದೇಶದಲ್ಲಿ ಹಲವು ಭಾಷೆಗಳಿವೆ. ಗುಜರಾತಿ, ಕನ್ನಡ, ಮಲೆಯಾಳಿ, ತಮಿಳು, ತೆಲುಗು, ಅಸ್ಸಾಮಿ, ಪಂಜಾಬಿ, ಮಲಯಾಳಿ ಸೇರಿ 25 ಭಾಷೆಗಳಿವೆ. ನಿಮ್ಮ ಗುಜರಾತಿ ಕೂಡ ಪ್ರಾಂತೀಯ ಭಾಷೆ. ಇದನ್ನ ನೋಡಿಯೂ ನೀವು ಹಿಂದಿ ಹೇರಿಕೆಗೆ ಹೊರಟಿದ್ದೇಕೆ. ವಿವಿಧತೆಯಲ್ಲಿ ಏಕತೆಯನ್ನ ಮುರಿಯೋಕೆ ನೋಡ್ತಿದ್ದೀರ. ಸಂವಿಧಾನದ ಬಗ್ಗೆ ನಿಮಗೆ ಗೌರವವಿದ್ದರೆ ಕೈಬಿಡಿ ಎಂದು ಹೇಳಿದರು.

ಬೆಳಗಾವಿ ಅಧಿವೇಶನ ನಡೆಸೋಕೆ ಹಿಂದೇಟು ವಿಚಾರ ಮಾತನಾಡಿ, ಬಿಜೆಪಿಯವರಿಗೆ ಅಲ್ಲಿನ ಜನರ ಭಯ ಕಾಡೋಕೆ ಶುರುವಾಗಿರಬೇಕು. ಅಲ್ಲಿನ ಜನ ಹಕ್ಕಿನ ಬಗ್ಗೆ ಪ್ರಶ್ನೆ ಮಾಡೋ ಭಯವಿದೆ. ಸಂತ್ರಸ್ತರ ಆಕ್ರೋಶ ಎದುರಿಸಬೇಕಾಗಬಹುದು. ಹೀಗಾಗಿಯೇ ಬೆಳಗಾವಿ ಸೆಷನ್ ರದ್ಧು ಮಾಡೋಕೆ ಹೊರಟಿರಬಹುದು. ಹಾಗೇನಾದರೂ ಮಾಡಿದರೆ ಅಲ್ಲಿನ ಜನರಿಗೆ ಅನ್ಯಾಯ ಮಾಡಿದಂತೆ. ಕೂಡಲೇ ಸೆಷನ್ ಕರೆಯಬೇಕು. ಸಂತ್ರಸ್ತರ ಸಮಸ್ಯೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದರು.

ABOUT THE AUTHOR

...view details