ಕರ್ನಾಟಕ

karnataka

ETV Bharat / state

CM ಜಂಟಿ ಕಾರ್ಯದರ್ಶಿಯಾಗಿ ಉಡುಪಿ ಜಿಲ್ಲಾಧಿಕಾರಿ​ ವರ್ಗಾವಣೆ - DC Jagadeesha G latest news 2021

ಉಡುಪಿ ಜಿಲ್ಲೆಗೆ ಕೂರ್ಮರಾವ್ ಎಂ. ಅವರನ್ನು ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

udupi-dc-jagadeesha-g
ಉಡುಪಿ ಡಿಸಿ ಜಗದೀಶ ಜಿ

By

Published : Aug 29, 2021, 10:41 PM IST

ಬೆಂಗಳೂರು: ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಜಗದೀಶ್​​ ಜಿ. ಅವರನ್ನು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.

ಈ ಸಂಬಂಧ ಆದೇಶ ಹೊರಡಿಸಲಾಗಿದ್ದು, ಉಡುಪಿ ಜಿಲ್ಲೆಗೆ ಕೂರ್ಮರಾವ್ ಎಂ. ಅವರನ್ನು ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ. ಕೂರ್ಮರಾವ್ ಎನ್ಇಕೆಆರ್​ಟಿಸಿಯ ಎಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಎನ್ಇಕೆಆರ್​ಟಿಸಿಯ ಎಂಡಿಯಾಗಿ ಯಶ್ವಂತ್ ಗುರುಕಾರ್​ ಅವರನ್ನು ವರ್ಗಾಯಿಸಲಾಗಿದೆ.

ಸಿಎಂ ಜಂಟಿ ಕಾರ್ಯದರ್ಶಿಯಾಗಿ ನೇಮಕವಾಗಿರುವ ಜಗದೀಶ್​​ ಜಿ. ಅವರು ಸಿಎಂ ಪರಿಹಾರ ನಿಧಿ, ಸಕ್ಕರೆ, ಜವಳಿ ಇಲಾಖೆ, ಪಶುಸಂಗೋಪನೆ, ಆಹಾರ ಮತ್ತು ಪೂರೈಕೆ, ಮೀನುಗಾರಿಕೆ, ಕೌಶಲ್ಯಾಭಿವೃದ್ಧಿ, ಸಹಕಾರ ಇಲಾಖೆ, ಜನತಾ ದರ್ಶನ, ಹಾವೇರಿ ಎಂಪಿ, ಶಾಸಕರ ಕ್ಷೇತ್ರ ಅಭಿವೃದ್ಧಿ ಕಾಮಗಾರಿ, ಶಾಸಕಾಂಗ ವಿಚಾರ, ಸಿಎಂ ಸಚಿವಾಲಯದ ಆಡಳಿತ ಸಂಬಂಧಿತ ಕಾರ್ಯಚಟುವಟಿಕೆಯನ್ನು ನಿಭಾಯಿಸಲಿದ್ದಾರೆ.

ಓದಿ:ಗಣೇಶೋತ್ಸವ ಆಚರಣೆಗೆ ಸರ್ಕಾರ ನಿರ್ಬಂಧವು ಖಂಡನೀಯ: ದೇಶಪಾಂಡೆ

ABOUT THE AUTHOR

...view details