ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಯುಎಇ ಆಸಕ್ತಿ... ಸಿಎಂ ಜೊತೆ ಯುಎಇ ರಾಯಭಾರಿ ಮಾತುಕತೆ - undefined

ಯುಎಇ ರಾಯಭಾರಿ ಡಾ. ಅಹಮದ್ ಎ.ಆರ್. ಅಲ್‍ಬನ್ನಾ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಯುಎಇ ರಾಯಭಾರಿ ಡಾ. ಅಹಮದ್ ಎ.ಆರ್. ಅಲ್‍ಬನ್ನಾ ಹಾಗೂ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ

By

Published : Feb 18, 2019, 5:13 PM IST

Updated : Feb 18, 2019, 5:39 PM IST

ಬೆಂಗಳೂರು: ನವದೆಹಲಿಯಲ್ಲಿರುವ ಯುಎಇ ರಾಯಭಾರಿ ಡಾ. ಅಹಮದ್ ಎ.ಆರ್. ಅಲ್‍ಬನ್ನಾ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅಹಮದ್ ಎ.ಆರ್. ಅಲ್‍ಬನ್ನಾ, ಕರ್ನಾಟಕದಲ್ಲಿ ಆಹಾರ ಭದ್ರತೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಕಡಿಮೆ ವೆಚ್ಚದ ವಸತಿ ನಿರ್ಮಾಣ ಯೋಜನೆಗಳಲ್ಲಿ ಹೂಡಿಕೆ ಮಾಡಲು ಯುಎಇ ಉತ್ಸುಕವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಪ್ರತಿಕ್ರಿಸಿದ ಸಿಎಂ ಕುಮಾರಸ್ವಾಮಿ, ಕಳೆದ ಹಲವು ವರ್ಷಗಳಲ್ಲಿ ಕರ್ನಾಟಕದಲ್ಲಿ ಕೃಷಿ, ನೀರಾವರಿ, ಆಟೋಮೊಬೈಲ್, ಡಿಜಿಟಲ್ ಮೆಡಿಸಿನ್ ಮುಂತಾದ ವಲಯಗಳಲ್ಲಿ ಯುಎಇ ಮಾಡುತ್ತಿರುವ ಹೂಡಿಕೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಮೂಲಭೂತ ಸೌಕರ್ಯ ಅಭಿವೃದ್ಧಿ, ಆಹಾರ ಪಾರ್ಕ್ ಮತ್ತು ಕಡಿಮೆ ವೆಚ್ಚದ ಗೃಹ ನಿರ್ಮಾಣ ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ಸ್ವಾಗತಿಸುತ್ತೇವೆ. ರಾಜ್ಯದಿಂದ ಉತ್ತಮ ಗುಣಮಟ್ಟದ ಹೂವು, ಹಣ್ಣು ಮತ್ತು ತರಕಾರಿ ಯೂರೋಪಿಯನ್ ದೇಶಗಳಿಗೆ ರಫ್ತಾಗುತ್ತಿವೆ. ಈ ವಲಯಗಳಲ್ಲಿಯೂ ಹೂಡಿಕೆಯನ್ನು ಸ್ವಾಗತಿಸುವುದಾಗಿ ಸಿಎಂ ತಿಳಿಸಿದರು.

ಸಭೆಯಲ್ಲಿ ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು.

Last Updated : Feb 18, 2019, 5:39 PM IST

For All Latest Updates

TAGGED:

ABOUT THE AUTHOR

...view details