ಕರ್ನಾಟಕ

karnataka

ETV Bharat / state

ರಾಜತಾಂತ್ರಿಕತೆ, ವಿದೇಶಾಂಗ ನೀತಿಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲ: ಯು.ಟಿ.ಖಾದರ್ - ರಾಜತಾಂತ್ರಿಕತೆಯಲ್ಲಿ ಕೇಂದ್ರ ಸರ್ಕಾರ ವಿಫಲ

ರಾಜತಾಂತ್ರಿಕತೆ ಹಾಗೂ‌ ವಿದೇಶಾಂಗ ನೀತಿಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇಂದ್ರದ ಮೇಲೆ ಒತ್ತಡ ಹಾಕುವಲ್ಲಿ ಕರ್ನಾಟಕ ಸರ್ಕಾರ ಕೂಡಾ ವಿಫಲವಾಗಿದೆ ಎಂದು ಮಾಜಿ ಸಚಿವ, ವಿಧಾನಸಭೆ ಪ್ರತಿಪಕ್ಷದ ನಾಯಕ ಯು.ಟಿ.ಖಾದರ್ ಆರೋಪಿಸಿದರು.

u-t-khadhar
ಪ್ರತಿಪಕ್ಷದ ಉಪನಾಯಕ ಯು. ಟಿ ಖಾದರ್

By

Published : Mar 2, 2022, 9:56 PM IST

ಬೆಂಗಳೂರು: ಉಕ್ರೇನ್- ರಷ್ಯಾ ಯುದ್ಧದಲ್ಲಿ ರಾಜ್ಯದ ವಿದ್ಯಾರ್ಥಿ ನವೀನ್ ಸಾವಿನ ಘಟನೆ ಅತ್ಯಂತ ನೋವು ತಂದಿದೆ. ಇದಕ್ಕೆ ಕೇಂದ್ರದ ನಿರ್ಲಕ್ಷ್ಯ ಹಾಗೂ ವೈಫಲ್ಯ ಪ್ರಮುಖ ಕಾರಣ ಎಂದು ಮಾಜಿ ಸಚಿವ, ವಿಧಾನಸಭೆ ಪ್ರತಿಪಕ್ಷದ ನಾಯಕ ಯು.ಟಿ.ಖಾದರ್ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜತಾಂತ್ರಿಕತೆ ಹಾಗೂ‌ ವಿದೇಶಾಂಗ ನೀತಿಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇಂದ್ರದ ಮೇಲೆ ಒತ್ತಡ ಹಾಕುವಲ್ಲಿ ಕರ್ನಾಟಕ ಸರ್ಕಾರ ಕೂಡಾ ವಿಫಲವಾಗಿದೆ ಎಂದು ದೂರಿದರು.


ಕೇಂದ್ರದ ಅಬ್ಬರದ ಪ್ರಚಾರ: ವಿದ್ಯಾರ್ಥಿಗಳ ಹೆತ್ತವರು ಆತಂಕದಲ್ಲಿ ಇದ್ದಾರೆ. ಕೇಂದ್ರ ಸರ್ಕಾರ ಕೇವಲ ಪ್ರಚಾರಕ್ಕಾಗಿ ಮಾತ್ರ ಕೆಲಸ ಮಾಡುವಂತಿದೆ‌. ಸಿವಿಲ್ ವಾರ್ ಆದಲ್ಲಿ ರಕ್ಷಣೆ ಕಷ್ಟ. ಆದರೂ ಲಿಬಿಯಾ ವಾರ್​​ನ ಅವಧಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಜನರ ರಕ್ಷಣೆ ಮಾಡಿದೆ. ಫೈಟರ್ ವಿಮಾನಗಳ ಬೆಂಗಾವಲಿನಲ್ಲಿ ಜನರ ರಕ್ಷಣೆ ಮಾಡಿತ್ತು ಎಂದು ಹೇಳಿದರು.


ಕೇಂದ್ರ ಸರ್ಕಾರದ ಆಲಸ್ಯವೇ ಕಾರಣ:ಉಕ್ರೇನ್- ರಷ್ಯಾ ಸಂಘರ್ಷದಲ್ಲಿ ವಿದ್ಯಾರ್ಥಿ ನವೀನ್ ಕನಸು ಕನಸಾಗಿಯೇ ಉಳಿದಿದೆ. ಇದಕ್ಕೆ ನೇರ ಹೊಣೆ ಕೇಂದ್ರ ಸರ್ಕಾರದ ಆಲಸ್ಯವೇ ಕಾರಣ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಬೆಂಗಳೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ:ಯುದ್ದಪೀಡಿತ ಉಕ್ರೇನ್​​ನಿಂದ ಈವರೆಗೆ 77 ಕನ್ನಡಿಗರ ಆಗಮನ.. ರಕ್ಷಣಾ ಕಾರ್ಯಾಚರಣೆ ಚುರುಕು

For All Latest Updates

TAGGED:

ABOUT THE AUTHOR

...view details