ಬೆಂಗಳೂರು: ಕೋಮುವಾದಿಗಳು ಹಿಜಾಬ್ ವಿಚಾರವನ್ನು ರಾಜ್ಯದಲ್ಲಿ ದೊಡ್ಡದು ಮಾಡಿದ್ದಾರೆ ಎಂದು ವಿಧಾನಸಭೆಯ ಕಾಂಗ್ರೆಸ್ನ ಉಪನಾಯಕ ಯು. ಟಿ ಖಾದರ್ ಕಿಡಿಕಾರಿದ್ದಾರೆ.
ವಿಧಾನಸಭೆಯ ಕಾಂಗ್ರೆಸ್ನ ಉಪನಾಯಕ ಯು. ಟಿ ಖಾದರ್ ಮಾತನಾಡಿದರು ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಮಸ್ಯೆಯನ್ನು ಬಗೆಹರಿಸಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯೋಚಿಸಬೇಕು. ಆದರೆ, ಸರ್ಕಾರ ಕೇವಲ ಆದೇಶಗಳನ್ನು ಹೊರಡಿಸಿಕೊಂಡು ಗೊಂದಲ ಸೃಷ್ಟಿಸುತ್ತಿದೆ ಎಂದು ಹೇಳಿದರು.
ತನ್ನ ವ್ಯಾಪ್ತಿಗೆ ಬಾರದೇ ಇದ್ದರೂ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಶಿರವಸ್ತ್ರ ಧರಿಸಿ ಗೇಟ್ವರೆಗೂ ಬರಬಹುದು. ಅದನ್ನೂ ತಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು. ಬಿಜೆಪಿ ಸರ್ಕಾರ ಶಿಕ್ಷಣ ಮೊಟಕುಗೊಳಿಸಲು ಹೊರಟಿದೆ. ಸಮನ್ವಯ, ಸೌಹಾರ್ದತೆ ಬದಲಿಗೆ ಕೋಮು ಭಾವನೆ ಮೂಡಿಸುತ್ತಿದ್ದಾರೆ. ನಮ್ಮ ಸರ್ಕಾರ ಬಂದರೆ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲಿದೆ ಎಂದು ಹೇಳಿದರು.
ಓದಿ:ವೇದಿಕೆ ಮೇಲೆಯೇ ಬಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್: ಕೋಪಗೊಂಡು ಹಾರ ತುರಾಯಿ ನಿರಾಕರಿಸಿದ ಸಚಿವರು