ಬೆಂಗಳೂರು:ಇಬ್ಬರು ಬಾಲಕಿಯರನ್ನು ತಮ್ಮೊಂದಿಗೆ ಕರೆದೊಯ್ದಿದ್ದ ಯುವಕರಿಬ್ಬರನ್ನು ಯಶವಂತಪುರ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಆರೀಫ್ ಹಾಗೂ ವಾಹಿದ್ ಇಬ್ಬರೂ ಉತ್ತರ ಪ್ರದೇಶದ ಮೂಲದವರಾಗಿದ್ದು, ಕೆಲ ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಸುಬೇದಾರ್ ಪಾಳ್ಯ ಬಳಿಯ ಸೋಫಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಯುವಕರಿಬ್ಬರಿಗೆ ಇಬ್ಬರು ಬಾಲಕಿಯರ ಪರಿಚಯವಾಗಿದೆ.
ಇನ್ನು ಇವರ ಪರಿಚಯ ಸ್ನೇಹಕ್ಕೆ ತಿರುಗಿಕೊಂಡಿದೆ. ಬಳಿಕ ನ.4ರಂದು ಬಾಲಕಿಯರು ಆ ಯುವಕರೊಂದಿಗೆ ಮನೆ ಬಿಟ್ಟು ತೆರಳಿದ್ದಾರೆ. ಈ ಸಂಬಂಧ ಬಾಲಕಿಯರ ಪೋಷಕರು ನಮ್ಮ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವುದಾಗಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.