ಕರ್ನಾಟಕ

karnataka

ETV Bharat / state

ಮದ್ಯ ಸೇವಿಸಿ ಬೈಕ್‌ ಸವಾರಿ: ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದು ಇಬ್ಬರು ಸಾವು - ರಸ್ತೆ ಕಾಮಗಾರಿಯ ಕುರಿತು ಅಳವಡಿಸಲಾಗಿದ್ದ ಸೂಚನಾ ಫಲಕ

ಮದ್ಯ ಸೇವಿಸಿದ ಅಮಲಿನಲ್ಲಿ ಇಬ್ಬರು ಬೈಕ್​ ಸವಾರರು ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.

youth died due to Bike collides with signboard  Bike collides with signboard in Bengaluru  young man died in road accident  ಮದ್ಯದ ಅಮಲಿನಲ್ಲಿ ಸೂಚನಾ ಫಲಕಕ್ಕೆ ಬೈಕ್ ಡಿಕ್ಕಿ  ಬೈಕ್​ ಸವಾರರು ಸೂಚನಾ ಫಲಕಕ್ಕೆ ಡಿಕ್ಕಿ  ಪಾನಮತ್ತ ಯುವಕರಿಬ್ಬರು ಸೂಚನಾ ಫಲಕಕ್ಕೆ ಬೈಕ್​ನಿಂದ ಡಿಕ್ಕಿ  ರಸ್ತೆ ಕಾಮಗಾರಿಯ ಕುರಿತು ಅಳವಡಿಸಲಾಗಿದ್ದ ಸೂಚನಾ ಫಲಕ  ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆ
ಮದ್ಯದ ಅಮಲಿನಲ್ಲಿ ಸೂಚನಾ ಫಲಕಕ್ಕೆ ಬೈಕ್ ಡಿಕ್ಕಿ

By

Published : Nov 1, 2022, 11:08 AM IST

Updated : Nov 1, 2022, 11:21 AM IST

ಬೆಂಗಳೂರು:ಪಾನಮತ್ತ ಯುವಕರಿಬ್ಬರು ರಸ್ತೆ ಸೂಚನಾ ಫಲಕಕ್ಕೆ ಬೈಕ್​ನಿಂದ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ರಾಜಾಜಿನಗರ ಸಂಚಾರಿ ಠಾಣಾ ವ್ಯಾಪ್ತಿಯ ಲಗ್ಗೆರೆ ಮೇಲ್ಸೇತುವೆ ಬಳಿ ಅಪಘಾತ ಸಂಭವಿಸಿತು. ಮೃತರನ್ನು ದೇವರಾಜು(22) ಹಾಗೂ ಜಗದೀಶ್(22) ಎಂದು ಗುರುತಿಸಲಾಗಿದೆ.

ಕುಡಿದು ಬೈಕ್​ನಲ್ಲಿ ಸಾಗುತ್ತಿದ್ದ ಇಬ್ಬರು ರಾತ್ರಿ 11:45ರ ಸುಮಾರಿಗೆ ಲಗ್ಗೆರೆ ಮೇಲ್ಸೇತುವೆಯ ಬಳಿ ರಸ್ತೆ ಕಾಮಗಾರಿಯ ಕುರಿತು ಅಳವಡಿಸಲಾಗಿದ್ದ ಸೂಚನಾ ಫಲಕಕ್ಕೆ ಅತಿವೇಗವಾಗಿ ಬಂದು ಗುದ್ದಿದ್ದಾರೆ. ಪರಿಣಾಮ ಜಗದೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ತೀವ್ರವಾಗಿ ಗಾಯಗೊಂಡ ದೇವರಾಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಿನಿ ಟ್ರ್ಯಾಕ್ಟರ್ ಪಲ್ಟಿ: ತಂದೆಗೆ ಊಟ ಕೊಡಲು ಹೊರಟಿದ್ದ ಬಾಲಕ ಸೇರಿ ಇಬ್ಬರು ಸಾವು

Last Updated : Nov 1, 2022, 11:21 AM IST

ABOUT THE AUTHOR

...view details