ಬೆಂಗಳೂರು:ನಗರದಲ್ಲಿ ಪೊಲೀಸರು ದಂಡ ವಿಧಿಸುತ್ತಾರೆ ಎಂಬ ಕಾರಣಕ್ಕೆ ಸಾಕಷ್ಟು ಜನರು ಹಾಫ್, ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುತ್ತಿದ್ದಾರೆ. ಸರ್ವೆ ಪ್ರಕಾರ ಅಪಘಾತದಲ್ಲಿ ಈ ಹಾಫ್ ಹೆಲ್ಮೆಟ್ ಧರಿಸಿದ್ದವರೇ ಹೆಚ್ಚು ಸಾಯುತ್ತಿದ್ದಾರೆ. ಹೀಗಾಗಿ ಇನ್ಮುಂದೆ ಹಾಫ್, ಕಳಪೆ ಹೆಲ್ಮೆಟ್ ನಿಷೇಧಿಸಲು ತೀರ್ಮಾನಿಸಲಾಗಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಆಯುಕ್ತರು, ಸದ್ಯ ನಗರದ ಹಲವು ಕಡೆ ಈ ಬಗ್ಗೆ ಸಂಚಾರ ಪೊಲೀಸರು ಜಾಗೃತಿ ಅಭಿಯಾನ ಮಾಡುತ್ತಿದ್ದಾರೆ. ಫೇಸ್ ಕವರ್ ಹೆಲ್ಮೆಟ್ ಧರಿಸುವಂತೆ ಮೊದಲು ಜಾಗೃತಿ ಮೂಡಿಸಲಾಗುವುದು. ನಂತರ ದಿನಗಳಲ್ಲಿ ಹಾಫ್, ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸಿದವರಿಗೆ ದಂಡ ವಿಧಿಸಲಾವುದು ಎಂದು ಅವರು ತಿಳಿಸಿದ್ದಾರೆ.