ಬೆಂಗಳೂರು : ಲಾರಿ ಹರಿದು ದ್ವಿಚಕ್ರ ವಾಹನ ಸವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳ್ಳಂಬೆಳಗ್ಗೆ 4 ಗಂಟೆ ಸುಮಾರಿಗೆ ಮೇಖ್ರಿ ವೃತ್ತದ ಶೆಲ್ ಪೆಟ್ರೊಲ್ ಬಂಕ್ ಮುಂಭಾಗದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸುಮನ್ ಎಂದು ಗುರುತಿಸಲಾಗಿದೆ.
ಮುಂಜಾನೆಯಾಗಿದ್ದರಿಂದ ವನ್ ವೇನಲ್ಲಿ ತೆರಳಿದ್ದ ಸುಮನ್ ದ್ವಿಚಕ್ರ ವಾಹನಕ್ಕೆ ಮುಂಬದಿಯಿಂದ ಬಂದ ಲಾರಿ ಢಿಕ್ಕಿಯಾಗಿದೆ. ಪರಿಣಾಮ ಸುಮಾರು 300 ಮೀಟರ್ನಷ್ಟು ದೂರ ದ್ವಿಚಕ್ರ ವಾಹನವನ್ನು ಲಾರಿ ಎಳೆದೊಯ್ದಿದ್ದು ಅಪಘಾತದಿಂದಾಗಿ ಲಾರಿ ಇಂಜಿನ್‌ಗೆ ಬೆಂಕಿ ತಗುಲಿದೆ.