ಬೆಂಗಳೂರು:ಚಿಕನ್ ಕೊಳ್ಳವ ನೆಪದಲ್ಲಿ ಬಂದ ಇಬ್ಬರು ಖದೀಮರು ಹಾಡುಹಗಲೇ ಸಾವಿರಾರು ರೂಪಾಯಿ ದೋಚಿ ಪರಾರಿಯಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೆಗ್ಗನಹಳ್ಳಿ ಕ್ರಾಸ್ ಬಳಿಯಿರುವ ಚಿಕನ್ ಶಾಪ್ನಲ್ಲಿ ಕಳೆದೆರಡು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ ಸೆ.15 ರಂದು ಗ್ರಾಹಕರ ಸೋಗಿನಲ್ಲಿ ಬಂದು ಚಿಕನ್ ಖರೀದಿ ಮಾಡುವ ನೆಪದಲ್ಲಿ ಶಾಪ್ಗೆ ಹೋಗಿ ಚಿಕನ್ ಆರ್ಡರ್ ಮಾಡಿದ್ದಾರೆ. ಅಂಗಡಿ ಮಾಲೀರಾದ ಅನಿತಾ ಒಳಹೋಗಿ ಹೊರ ಬರುವಷ್ಟರಲ್ಲಿ ಕ್ಯಾಶ್ ಡ್ರಾಯರ್ನಲ್ಲಿದ್ದ ಸುಮಾರು 35 ಸಾವಿರಕ್ಕೂ ಅಧಿಕ ಮೊತ್ತದ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಆದರೆ ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗುತ್ತಿದೆ.
ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: 'ಕೈ'-ದಳ ವಿರೋಧದ ನಡುವೆಯೇ ಪರಿಷತ್‌ನಲ್ಲಿ ಗ್ರಾಮ ಸ್ವರಾಜ್, ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಅಂಗೀಕಾರ