ಬೆಂಗಳೂರು:ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸಿದ್ದ ಹಾಗೂ ಅನುತ್ತೀರ್ಣರಾದ ಕಾರಣ ಇಬ್ಬರು ವಿದ್ಯಾರ್ಥಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಪಿಯುಸಿ ಪರೀಕ್ಷೆ ಫಲಿತಾಂಶದ ಬಳಿಕ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ - Student Suicide by Fail
ಪಿಯುಸಿ ಫಲಿತಾಂಶ ಹೊರಬೀಳುತ್ತಿದ್ದಂತೆ ಕಡಿಮೆ ಅಂಕ ಗಳಿಸಿದ್ದ ಹಾಗೂ ಅನುತ್ತೀರ್ಣರಾದ ಕಾರಣ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಿನಾಯಕನಗರ ನಿವಾಸಿ ರಾಹುಲ್ ರೆಡ್ಡಿ (21) ಹಾಗೂ ಬಾಬಾನಗರ ನಿವಾಸಿ ಪ್ರವೀಣ್ (19) ಮೃತರು. ರಾಹುಲ್ ರೆಡ್ಡಿ ತಂದೆ-ತಾಯಿ ಜೊತೆ ಬಾಬಾನಗರದಲ್ಲಿ ವಾಸವಿದ್ದ. ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾದಾಗ ಕಡಿಮೆ ಅಂಕ ಬಂದಿರುವ ಕಾರಣ ಮನನೊಂದು ಮನೆಯ ಕೊಠಡಿಯಲ್ಲಿನ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಮತ್ತೋರ್ವ ವಿನಾಯಕ ನಗರ ನಿವಾಸಿ ಪ್ರವೀಣ್, ದ್ವಿತೀಯ ಪಿಯುಸಿಯ ಕೆಲ ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದ. ಇದೇ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಬಾಗಲೂರು ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಮೃತದೇಹಗಳ ಗಂಟಲು ದ್ರವ ಸಂಗ್ರಹಿಸಿ ಕೊರೊನಾ ಟೆಸ್ಟ್‌ಗೆ ಕಳುಹಿಸಲಾಗಿದೆ.