ದೇವನಹಳ್ಳಿ:ಕಳೆದ ಆರು ದಿನಗಳಿಂದ ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ನಲ್ಲಿ ಮಧ್ಯಪ್ರದೇಶದ 19 ಬಂಡಾಯ ಶಾಸಕರು ವಾಸ್ತವ್ಯ ಹೂಡಿದ್ದಾರೆ.
ಇಂದು ಮುಂಜಾನೆ ಇಬ್ಬರು ಶಾಸಕರು ಬೆಂಗಳೂರಿಗೆ ಪ್ರಯಾಣ ಬೆಳಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ಮುಂಜಾನೆ 4 ರ ಸಮಯದಲ್ಲಿ ಪೊಲೀಸ್ ಬೆಂಗಾವಲು ವಾಹನದೊಂದಿಗೆ ರೆಸಾರ್ಟ್ನಿಂದ ಹೊರ ಬಂದ ಕಾರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ.
ಬೆಳಗಿನ ಜಾವ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಇಬ್ಬರು ಬಂಡಾಯ ಶಾಸಕರು ಕಾರಿನಲ್ಲಿ ಇಬ್ಬರು ಬಂಡಾಯ ಶಾಸಕರಿದ್ದು, ಬೆಂಗಳೂರಿನಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ಮಾಡುವ ಸಾಧ್ಯತೆ ಇದೆ. ನಿನ್ನೆ ಸಹ ರೆಸಾರ್ಟ್ನಲ್ಲಿದ್ದ 19 ಶಾಸಕರು ಏರ್ಪೋರ್ಟ್ನಲ್ಲಿ ಜೆ. ಪಿ.ನಡ್ಡಾ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದರು.
ಜೆ.ಪಿ.ನಡ್ಡಾ ಬೆಂಗಳೂರಿಗೆ ಹೊರಟ ತಕ್ಷಣವೇ ರೆಬಲ್ ಶಾಸಕರು ಮತ್ತೆ ರೆಸಾರ್ಟ್ಗೆ ಮರಳಿದರು. ಮುಂಜಾನೆ ಹೊರ ಹೊರಟ ಮಧ್ಯಪ್ರದೇಶ ಶಾಸಕರ ನಡೆ ಇನ್ನೂ ನಿಗೂಢವಾಗಿದೆ.