ಕರ್ನಾಟಕ

karnataka

ETV Bharat / state

ಮದ್ಯದ ಅಮಲಿನಲ್ಲಿ ಗಲಾಟೆ; ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರ ಹತ್ಯೆ - ಈಟಿವಿ ಭಾರತ ಕನ್ನಡ

ಕುಡಿದ ಅಮಲಿನಲ್ಲಿ ಗಲಾಟೆ- ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರ ಹತ್ಯೆ- ಸಿಲಿಕಾನ್​ ಸಿಟಿಯ ಎರಡು ಕಡೆಗಳಲ್ಲಿ ಘಟನೆ

bengaluru
ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರ ಹತ್ಯೆ

By

Published : Feb 11, 2023, 1:31 PM IST

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ವರದಿಯಾಗಿದೆ. ವರ್ತೂರು ಬಳಿಯ ಬಾರ್​ನಲ್ಲಿ ಕುಡಿದ ಅಮಲಿನಲ್ಲಿ ಇಬ್ಬರು ಗಲಾಟೆ ಮಾಡಿಕೊಂಡಿದ್ದು, ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಮತ್ತೊಂದೆಡೆ ಹಳೇ ದ್ವೇಷಕ್ಕೆ ಸ್ನೇಹಿತನನ್ನೇ ಚಾಕು ಇರಿದು ಕೊಲೆ ಮಾಡಿರುವ ಘಟನೆ ಕೋಣನಕುಂಟೆ ಬಳಿ ನಡೆದಿದೆ.

ಕುಡಿದು ಗಲಾಟೆ, ಕೊಲೆಯಲ್ಲಿ ಅಂತ್ಯ:ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಶ್ರೀಧರ್​ ಮತ್ತು ಮುನಿಯಪ್ಪ ಎಂಬವರು ಕುಡಿದು ಗಲಾಟೆ ಮಾಡುತ್ತಿದ್ದರು. ಈ ವೇಳೆ ಕೋಪಗೊಂಡ ಶ್ರೀಧರ್​, ಮುನಿಯಪ್ಪ(45) ಅವರನ್ನು ಕೊಲೆಗೈದಿದ್ದಾನೆ. ಘಟನೆಯು ಶುಕ್ರವಾರ ತಡರಾತ್ರಿ ವರ್ತೂರು ಠಾಣಾ ವ್ಯಾಪ್ತಿಯ ಹಲಸಹಳ್ಳಿ ಮುಖ್ಯ ರಸ್ತೆಯಲ್ಲಿರುವ ಎಸ್ಎಸ್ಎಸ್ ಬಾರ್​ನಲ್ಲಿ ನಡೆದಿದೆ.

ಶ್ರೀಧರ್​ ಮತ್ತು ಮುನಿಯಪ್ಪ ಇಬ್ಬರು ಒಂದೇ ಏರಿಯಾದಲ್ಲಿ ವಾಸಿಸುತ್ತಿದ್ದರು. ರಾತ್ರಿ ಕುಡಿಯಲೆಂದು ಇಬ್ಬರು ಬಾರ್​ಗೆ ತೆರಳಿದ್ದರು. ಈ ವೇಳೆ ಮದ್ಯಪಾನ ಮಾಡಿ ಗಲಾಟೆ ಮಾಡಿಕೊಂಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಶ್ರೀಧರ್ ಮಚ್ಚಿನಿಂದ ಮುನಿಯಪ್ಪನ ಮೇಲೆ ಹಲ್ಲೆ ಮಾಡಿದ್ದು ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶ್ರೀಧರ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಹಳೇ ದ್ವೇಷಕ್ಕೆ ಚಾಕು ಇರಿದು ಸ್ನೇಹಿತನ ಕೊಲೆ:ಮತ್ತೊಂದು ಕೊಲೆ ಪ್ರಕರಣವು ಶುಕ್ರವಾರ ತಡರಾತ್ರಿ ಕೋಣನಕುಂಟೆ ಬಳಿ ನಡೆದಿದೆ. ಹಳೇ ವೈಷಮ್ಯಕ್ಕೆ ಸ್ನೇಹಿತನನ್ನೇ ಚಾಕುವಿನಿಂದ ಇರಿದು ಸ್ನೇಹಿತನೇ ಹತ್ಯೆಗೈದಿದ್ದಾನೆ. ಶರತ್ ಕುಮಾರ್ (25) ಕೊಲೆಯಾದ ಯುವಕನಾಗಿದ್ದು ಲೋಕೇಶ್ ಹತ್ಯೆಗೈದ ಆರೋಪಿ.

ಇದನ್ನೂ ಓದಿ:ಕನ್ನಡಪರ ಹೋರಾಟಗಾರರ ವಿರುದ್ಧ ರೌಡಿಶೀಟ್; ಬೆಳಗಾವಿ ಪೊಲೀಸರ ನಡೆಗೆ ಕಾರ್ಯಕರ್ತರ ಆಕ್ಷೇಪ

ಸ್ನೇಹಿತರಾಗಿದ್ದ ಶರತ್ ಕುಮಾರ್ ಮತ್ತು ಲೋಕೇಶ್ ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿ ಬೇರೆಯಾಗಿದ್ದರು. ತಡರಾತ್ರಿ ಮದ್ಯದ ಅಮಲಿನಲ್ಲಿ ಮುಖಾಮುಖಿಯಾದ ಇಬ್ಬರ ನಡುವೆ ಮತ್ತೆ ಗಲಾಟೆಯಾಗಿದೆ. ಈ ವೇಳೆ ಕೋಪಗೊಂಡ ಶರತ್ ಕುಮಾರ್, ಲೋಕೇಶ್​ಗೆ ಚಾಕು ಇರಿಯಲು ಮುಂದಾಗಿದ್ದಾನೆ. ಇದನ್ನು ತಪ್ಪಿಸಲು ಪ್ರಯತ್ನಿಸಿದ ಲೋಕೇಶ್​, ಶರತ್​ ಕೈಯಿಂದ ಚಾಕು ಕಸಿದುಕೊಂಡು ಆತನಿಗೆಯೇ ಇರಿದಿದ್ದಾನೆ. ಪರಿಣಾಮ ಶರತ್ ಕುಮಾರ್ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ಮಹಿಳೆಗೆ ಚಾಕು ಇರಿತ, ಆರೋಪಿ ಅರೆಸ್ಟ್​: ಸಂಬಂಧ ಒಲ್ಲೆ ಎಂದವಳಿಗೆ ವ್ಯಕ್ತಿಯೊಬ್ಬ ಚಾಕು ಇರಿದಿದ್ದ ಘಟನೆ ಬೆಂಗಳೂರು ಆರ್​.ಟಿ.ನಗರ ವ್ಯಾಪ್ತಿಯ ಮಠದಹಳ್ಳಿಯಲ್ಲಿ ನಡೆದಿತ್ತು. ಜನವರಿ 15ರ ತಡರಾತ್ರಿ ಶೇಕ್​ ಮೆಬಬೂಬ್​ ಎಂಬವನು ಹಬೀಬಾ ತಾಜ್​ ಎಂಬ ಮಹಿಳೆಗೆ ಚಾಕು ಇರಿದಿದ್ದನು. ಗಾಯಗೊಂಡಿದ್ದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದರು.

ಹಬೀಬಾ ತಾಜ್​ಗೆ ವಿವಾಹವಾಗಿದ್ದು, ಪತಿ 6 ವರ್ಷಗಳ ಹಿಂದೆ ತೀರಿಕೊಂಡಿದ್ದರು. ಎರಡು ಮಕ್ಕಳೊಂದಿಗೆ ಆಕೆ ವಾಸವಾಗಿದ್ದಳು. ಕೆಲ ವರ್ಷಗಳ ಹಿಂದೆ ಆಕೆಗೆ ಆರೋಪಿ ಶೇಕ್​ ಮೆಹಬೂಬ್​ನ ಪರಿಚಯವಾಗಿತ್ತು. ಆಟೋ ಚಾಲಕನಾಗಿದ್ದ ಶೇಕ್​ಗೆ ಮದುವೆಯಾಗಿ ಮಕ್ಕಳಿದ್ದರೂ ಸಹ ಹಬೀಬಾ ಜೊತೆ ಸಲುಗೆಯಿಂದಿದ್ದ. ಇತ್ತೀಚೆಗೆ ಆತನಿಂದ ದೂರವಾಗಲು ಪ್ರಯತ್ನಿಸಿದ್ದ ಹಬೀಬಾ ಬೇರೆ ಮದುವೆಯಾಗಲು ನಿರ್ಧರಿಸಿದ್ದರು. ಇದನ್ನು ಅರಿತ ಶೇಕ್​ ಆಕೆಯ ಮನೆಗೆ ನುಗ್ಗಿ ಗಲಾಟೆ ಮಾಡಿದ್ದನು. ಬಳಿಕ ಜಗಳ ತಾರಕಕ್ಕೇರಿ ಶೇಕ್​ ಆಕೆಗೆ ಚೂರಿಯಿಂದ ಇರಿದಿದ್ದನು. ಈ ಸಂಬಂಧ ಆರ್​.ಟಿ.ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು.

ಇದನ್ನೂ ಓದಿ:ಐಎಸ್​ಡಿ-ಎನ್​ಐಎ ಭರ್ಜರಿ ಕಾರ್ಯಾಚರಣೆ.. ಅಲ್ ಖೈದಾ ಜೊತೆ ನಂಟು, ಬೆಂಗಳೂರಿನಲ್ಲಿ ಶಂಕಿತ ಅರೆಸ್ಟ್​

ABOUT THE AUTHOR

...view details