ಕರ್ನಾಟಕ

karnataka

ETV Bharat / state

ಕೊರೊನಾ ಪರೀಕ್ಷೆಗೆ ಬೆಂಗಳೂರಿನಲ್ಲಿ ಇನ್ನೆರಡು ಖಾಸಗಿ ಲ್ಯಾಬ್​ಗಳು ಲಭ್ಯ.. - new lab for corona testing

ಖಾಸಗಿ ಪ್ರಯೋಗಾಲಯಗಳಲ್ಲೂ ಜನ ತೆರಳಿದರೆ ಹೆಚ್ಚು ಜನರಿಗೆ ಪರೀಕ್ಷೆ ಮಾಡಲು ಸಾಧ್ಯವಾಗುತ್ತದೆ ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಐಸಿಎಂಆರ್​ ಈ ಕ್ರಮಕೈಗೊಂಡಿದೆ.

corona
ಕೊರೊನಾ

By

Published : Apr 1, 2020, 10:47 AM IST

Updated : Apr 1, 2020, 11:42 AM IST

ಬೆಂಗಳೂರು :ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಕೊರೊನಾ ಸೋಂಕು ಪರೀಕ್ಷೆಗಾಗಿ ಬೆಂಗಳೂರಿನಲ್ಲಿ ಇನ್ನೆರೆಡು ಖಾಸಗಿ ಲ್ಯಾಬ್‌ಗಳು ಶುರುವಾಗಿವೆ.

ಶಿವಾಜಿನಗರದ ನ್ಯೂಬರ್ಗ್ ಆನಂದ್ ಲ್ಯಾಬ್ ಮತ್ತು ಬಸವನಗುಡಿಯ ಕ್ಯಾನ್ಸೈಟ್ ಟೆಕ್ನಾಲಜೀಸ್​ಗಳಿಗೆ ಐಸಿಎಂಆರ್‌ನಿಂದ ಪರವಾನಗಿ ಸಿಕ್ಕಿದೆ. ಈ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವವರು ಅದಕ್ಕೆ ಹಣ ತೆರಬೇಕು. ಮೊದಲ ಹಂತದ ಪರೀಕ್ಷೆಗೆ ₹3000, ಮರುದೃಢೀಕರಣ ಪರೀಕ್ಷೆಗೆ 1,500 ರೂ. ನಿಗದಪಡಿಸಲಾಗಿದೆ. ಈ ದರವನ್ನು ಐಸಿಎಂಆರ್ ನಿಗದಿ ಮಾಡಿದ್ದು, ಒಟ್ಟಾರೆ ಪರೀಕ್ಷಾ ವೆಚ್ಚ ₹4,500 ಮೀರುವಂತಿಲ್ಲ ಎಂದು ತಿಳಿಸಿದೆ.

ಪರವಾನಗಿ ಪತ್ರ

ಇದರ ಜೊತೆಗೆ ಸರ್ಕಾರಿ ಲ್ಯಾಬ್‌ಗಳು ಕೂಡಾ ಎಂದಿನಂತೆ ಪರೀಕ್ಷೆ ನಡೆಸುತ್ತಿವೆ. ಖಾಸಗಿ ಪ್ರಯೋಗಾಲಯಗಳಲ್ಲೂ ಜನ ತೆರಳಿದರೆ ಹೆಚ್ಚು ಜನರಿಗೆ ಪರೀಕ್ಷೆ ಮಾಡಲು ಸಾಧ್ಯವಾಗುತ್ತದೆ ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಐಸಿಎಂಆರ್​ ಈ ಕ್ರಮಕೈಗೊಂಡಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 8 ಲ್ಯಾಬ್‌ಗಳಲ್ಲಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ.

Last Updated : Apr 1, 2020, 11:42 AM IST

ABOUT THE AUTHOR

...view details