ಕರ್ನಾಟಕ

karnataka

ETV Bharat / state

ಹಲ್ಲೆ ಮಾಡಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅಂದರ್​ - undefined

ಹಲ್ಲೆ ಮಾಡಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಜಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳು

By

Published : Mar 26, 2019, 5:13 PM IST

ಬೆಂಗಳೂರು: ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಚಿಕ್ಕಜಾಲ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೈಯದ್​ ವಸೀಂ, ರೋಷನ್​​ ಉಲ್ಲಾಬೇಗ್​​ ಬಂಧಿತ ಆರೋಪಿಗಳು. ಆರೋಪಿಗಳು ಇದೇ ತಿಂಗಳ 14 ರಂದು ಸುಮಾರು 4-20ರ ಸಮಯದಲ್ಲಿ ಚಿಕ್ಕಜಾಲ ಪೊಲೀಸ್​​ ಠಾಣೆ ವ್ಯಾಪ್ತಿಯ ಏರ್​​​ಪೋರ್ಟ್​ಗೆ ಕೆಲಸಕ್ಕೆ ಹೋಗಲು ನಿಂತಿದ್ದ, ಶ್ರೀ ಶಿವಾಜಿ ಅಪ್ಪಾರಾಯಿ ರಾಯಪ್ಪ ಎಂಬುವರಿಗೆ ಇವರಿಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಸುಲಿಗೆ ಮಾಡಿದ್ರು. ಈ ಸಂಬಂಧ ಚಿಕ್ಕಜಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತಂಡವನ್ನು ರಚಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಆರೋಪಿಗಳ ವಿರುದ್ಧ ಬಾಗಲೂರು ಪೊಲೀಸ್​ ಠಾಣೆ, ಹೆಬ್ಬಾಳ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳು ಕೂಡ ಇವೆ. ಬಂಧಿತ ಆರೋಪಿಗಳಿಂದ ಚಿನ್ನದ ಮಾಂಗಲ್ಯ ಸರ, ಒಂದು ಸ್ಯಾಮ್‌ಸಂಗ್‌ ಮೊಬೈಲ್ ಫೋನ್, ನಗದು, ಕೃತ್ಯಕ್ಕೆ ಬಳಸಿದ ಮಚ್ಚು , ‌ಒಂದು ಚಾಕು ವಶಪಡಿಸಿಕೊಂಡಿದ್ದಾರೆ. ಇನ್ನು ಆರೋಪಿಗಳು ಬೇರೆ ಬೇರೆ ಕೃತ್ಯಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ ತನಿಖೆ ಮುಂದುವರೆದಿದೆ.

For All Latest Updates

TAGGED:

ABOUT THE AUTHOR

...view details