ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇಂದು ಮತ್ತು ನಾಳೆ ನಗರದಲ್ಲಿ ನೀರು ಸರಬರಾಜಿನಲ್ಲಿ ಗಂಭೀರ ವ್ಯತ್ಯಯ ಕಂಡು ಬರಲಿದೆ ಎಂದು ಜಲಮಂಡಳಿ ಮಾಹಿತಿ ನೀಡಿದೆ. ಮಂಡ್ಯ ಜಿಲ್ಲೆಯ ಹಲಗೂರಿನಲ್ಲಿ ಧಾರಾಕಾರ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಮಳವಳ್ಳಿ ತಾಲೂಕು ಟಿ ಕೆ ಹಳ್ಳಿಯಲ್ಲಿರುವ ಕಾವೇರಿ ನೀರಿನ ಜಲರೇಚಕ ಯಂತ್ರಾಗಾರ (ಪಂಪ್ಸ್ಟೇಷನ್) ಜಲಾವೃತಗೊಂಡಿದೆ. ಪರಿಣಾಮ ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಏರುಪೇರಾಗಲಿದೆ. ಹೀಗಾಗಿ ಸೆಪ್ಟೆಂಬರ್ 5 ಮತ್ತು 6 ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲ ಮಂಡಳಿ ಮಾಹಿತಿ ನೀಡಿದೆ.
ಎಲ್ಲೆಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ?:ಯಶವಂತಪುರ, ಮಲ್ಲೇಶ್ವರಂ, ಶೇಷಾದ್ರಿಪುರಂ, ಓಕಳಿಪುರ, ಶ್ರೀರಾಂಪುರ, ಮತ್ತಿಕೆರೆ ಸುತ್ತಮುತ್ತಲಿನ ಪ್ರದೇಶ, ಸದಾಶಿವನಗರ, ಪ್ಯಾಲೆಸ್ ಗುಟ್ಟಹಳ್ಳಿ, ಆರ್.ಎಂ.ವಿ. 2ನೇ ಹಂತ. ಆರ್.ಟಿ.ನಗರ, ಜಿ.ಕೆ.ವಿ.ಕೆ, ಸಂಜಯನಗರ, ನ್ಯೂ ಬಿಇಎಲ್ ರಸ್ತೆ, ಹೆಬ್ಬಾಳ, ದಿಣ್ಣೂರು, ಗಂಗಾನಗರ, ಚಿಕ್ಕಪೇಟೆ, ಮಾರ್ಕೆಟ್, ಧರ್ಮರಾಯ ಸ್ವಾಮಿ ದೇವಸ್ಥಾನ, ಅವಿನ್ಯೂ ರಸ್ತೆ, ಮೆಜೆಸ್ಟಿಕ್, ಗಾಂಧಿನಗರ, ಕಸ್ತೂರಿಬಾ ರಸ್ತೆ, ಶಿವಾಜಿ ನಗರ, ದೇವರ ಜೀವನಹಳ್ಳಿ, ಕೋಲ್ಸ್‍ಪಾರ್ಕ್, ಕಾಡುಗೋಡನಹಳ್ಳಿ, ಪಿಳ್ಳಣ್ಣ ಗಾರ್ಡನ್, ಸಗಾಯಿ ಪುರ, ಲಿಂಗರಾಜಪುರಂ, ಟ್ಯಾನರಿ ರಸ್ತೆ ಜಗಜೀವನ್ ಭೀಮಾನಗರ, ಐಟಿಐ ಕಾಲೋನಿ, ಇಂದಿರಾನಗರ 1ನೇ ಹಂತ, ಲಕ್ಷ್ಮೀಪುರ, ಆಂಧ್ರಕಾಲೋನಿ, ಕಲ್ಲಹಳ್ಳಿ, ಹೆಚ್.ಎ.ಎಲ್, ಇಂದಿರಾನಗರ ಸೇವಾಠಾಣೆ, ಹಲಸೂರು, ಓಗಿ ಗಾರ್ಡನ್, ಮರ್ಫಿ ಟೌನ್, ಚಾಮರಾಜಪೇಟೆ, ಶಾಂತಿನಗರ, ಬಿಟಿಎಂ, ಹೆಬ್ಬಾಳ, ಮಹಾಲಕ್ಷ್ಮಿ ಲೇಔಟ್, ವಿಜಯನಗರ, ಗೋವಿಂದ ರಾಜನಗರ, ಪುಲಿಕೇಶಿ ನಗರ, ಶಿವಾಜಿನಗರ, ಸಿವಿ ರಾಮನ್ ನಗರ ಸೇರಿದಂತೆ ಬಹುತೇಕ ಕಡೆ ನೀರು ಎರಡು ದಿನ ಬಂದ್ ಆಗಲಿದೆ ಎಂದು ಜಲಮಂಡಳಿ ತಿಳಿಸಿದೆ.