ಕರ್ನಾಟಕ

karnataka

ETV Bharat / state

ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ ನಗರ ಪೊಲೀಸ್ : 10 ಲಕ್ಷ ರೂ. ಮೌಲ್ಯದ 31 ಕೆಜಿ ಗಾಂಜಾ ವಶ - two Nigerians arrested by bengalore police

ಹೆಣ್ಣೂರು ಠಾಣಾ ವ್ಯಾಪ್ತಿಯ ಸಿಎಂಆರ್ ಲೇಔಟ್​ನಲ್ಲಿ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು 10 ಲಕ್ಷ ರೂ. ಬೆಲೆ ಬಾಳುವ 31 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ..

two-nigerians-arrested-by-police-due-to-drug-case-in-bengalore
ಚಿನೋನಿ ಹಾಗೂ ಕ್ಲೆವಿಯನ್

By

Published : Sep 28, 2021, 4:26 PM IST

ಬೆಂಗಳೂರು :ನಗರದ ಹೆಣ್ಣೂರು ಪೊಲೀಸರು ಕಾರ್ಯಾಚರಣೆ ನಡೆಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಚಿನೋನಿ ಹಾಗೂ ಕ್ಲೆವಿಯನ್ ಎಂದು ಗುರುತಿಸಲಾಗಿದೆ.

31 ಕೆಜಿ ಗಾಂಜಾ ವಶಪಡಿಸಿಕೊಂಡ ಪೊಲೀಸರು..

ಹೆಣ್ಣೂರು ಠಾಣಾ ವ್ಯಾಪ್ತಿಯ ಸಿಎಂಆರ್ ಲೇಔಟ್​ನಲ್ಲಿ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು 10 ಲಕ್ಷ ರೂ. ಬೆಲೆ ಬಾಳುವ 31 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಬ್ಬರು ಬಂಧಿತ ನೈಜೀರಿಯಾ ಪ್ರಜೆಗಳ ಬಳಿ ಯಾವುದೇ ವೀಸಾ ಸೇರಿ ಸರಿಯಾದ ದಾಖಲಾತಿಗಳು ದೊರೆತಿಲ್ಲ. ಹೀಗಾಗಿ, ಕಲಂ 14ರ ಅನ್ವಯ ಕ್ರಮಕೈಗೊಳ್ಳುತ್ತೇವೆ. ಇವುಗಳನ್ನು ಪರಿಶೀಲಿಸಿ ಮನೆ ಬಾಡಿಗೆ ನೀಡಿದ ಮಾಲೀಕನ ವಿರುದ್ಧ ಕೂಡ ಕ್ರಮ ಜರುಗಿಸಲಿದ್ದೇವೆ. ಇನ್ಸ್​ಪೆಕ್ಟರ್​ ವಸಂತಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಓದಿ:Live Video: ಕುಳ್ಳ ವೆಂಕಟೇಶ್ ಭೀಕರ ಹತ್ಯೆ.. ಸಿಸಿಟಿವಿಯಲ್ಲಿ ‌ಸೆರೆಯಾದ ದೃಶ್ಯ

ABOUT THE AUTHOR

...view details