ಕರ್ನಾಟಕ

karnataka

ETV Bharat / state

ಹೊಂಗಸಂದ್ರದಲ್ಲಿ ಮತ್ತೆರಡು ಕೊರೊನಾ ಪಾಸಿಟಿವ್​ ಪ್ರಕರಣ ಪತ್ತೆ - Corona positives cases

ಬೆಂಗಳೂರಿನ ಹೊಂಗಸಂದ್ರದಲ್ಲಿ ಇಂದು ಮತ್ತಿಬ್ಬರಲ್ಲಿ ಕೊರೊನಾ ಪತ್ತೆಯಾಗಿದೆ. ಇವರು ರೋಗಿ-419ರ ಸಂಪರ್ಕ ಹೊಂದಿದ್ದರು.

ಕೊರೊನಾ
ಕೊರೊನಾ

By

Published : May 8, 2020, 9:01 PM IST

ಬೆಂಗಳೂರು: ಹೊಂಗಸಂದ್ರದಲ್ಲಿ ಮತ್ತಿಬ್ಬರು ವಲಸೆ ಕಾರ್ಮಿಕರಲ್ಲಿ ಕೊರೊನಾ ಪತ್ತೆಯಾಗಿದೆ. 60 ವರ್ಷದ ವ್ಯಕ್ತಿ ಹಾಗೂ ಮಧ್ಯ ವಯಸ್ಕ(35-40)ನಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ.

ಹೊಂಗಸಂದ್ರದಲ್ಲಿ ವಾಸವಾಗಿದ್ದ ಇವರು ಗುಜುರಿ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ರೋಗಿ- 419ರ ಸಂಪರ್ಕ ಹೊಂದಿದ್ದರು. ಈಗಾಗಲೇ ಮೊದಲು ಕೊರೊನಾ ಬಂದ ವ್ಯಕ್ತಿ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಇವರ ಸಂಪರ್ಕದಲ್ಲಿದ್ದವರಿಗೆ ಈಗ ಕೊರೊನಾ ಕಾಣಿಸಿಕೊಳ್ಳುತ್ತಿದೆ.

ಇವರು ವಲಸೆ ಕಾರ್ಮಿಕನ ಪ್ರಥಮ ಸಂಪರ್ಕಿತರಾಗಿದ್ದು, ಇಷ್ಟು ದಿನ ಕ್ವಾರಂಟೈನ್​ನಲ್ಲಿದ್ದರು. ಇವರ ವೃತ್ತಿ, ಇವರ ಸಂಪರ್ಕದಲ್ಲಿದ್ದವರ ಬಗ್ಗೆ ಇನ್ನಷ್ಟೇ ಮಾಹಿತಿ ಕಲೆಹಾಕಬೇಕಿದೆ ಎಂದು ಡಾ. ಸುರೇಶ್ ತಿಳಿಸಿದ್ದಾರೆ.

ABOUT THE AUTHOR

...view details