ಕರ್ನಾಟಕ

karnataka

ETV Bharat / state

ಇಬ್ಬರು ಅತೃಪ್ತರ ಅನರ್ಹತೆ ವಿಚಾರಣೆ ಪೂರ್ಣ, ತೀರ್ಪು ಕಾಯ್ದಿರಿಸಲಾಗಿದೆ: ಸ್ಪೀಕರ್ - undefined

ಅತೃಪ್ತ ಶಾಸಕರ ಅರ್ಜಿ ಸಂಬಂಧ ಸ್ಪೀಕರ್ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಿರುವ ಅಫಿಡವಿಟ್​​​ನಲ್ಲಿ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅನರ್ಹತೆ ದೂರಿನ ಸಂಬಂಧ ವಿಚಾರಣೆ ನಡೆಸಲಾಗಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್​ ತಿಳಿಸಿದ್ದಾರೆ.

ಸ್ಪೀಕರ್

By

Published : Jul 13, 2019, 4:23 PM IST

ಬೆಂಗಳೂರು:ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ವಿರುದ್ಧದ ಅನರ್ಹತೆ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಮ್ಮ ಅಫಿಡವಿಟ್​​​ನಲ್ಲಿ ವಿವರಿಸಿದ್ದಾರೆ.

ಅತೃಪ್ತ ಶಾಸಕರ ಅರ್ಜಿ ಸಂಬಂಧ ಸ್ಪೀಕರ್ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಿರುವ ಅಫಿಡವಿಟ್​​​ನಲ್ಲಿ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅನರ್ಹತೆ ದೂರಿನ ಸಂಬಂಧ ವಿಚಾರಣೆ ನಡೆಸಲಾಗಿದ್ದು, ತೀರ್ಪು ಕಾಯ್ದಿರಿಸಲಾಗಿದೆ. ಅದರ ಜೊತೆಗೆ ಜುಲೈ 10ಕ್ಕೆ ಕಾಂಗ್ರೆಸ್ ಪಕ್ಷ 8 ಅತೃಪ್ತ ಶಾಸಕರ ವಿರುದ್ಧ ಅನರ್ಹತೆ ದೂರು ನೀಡಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.

ಅತೃಪ್ತರಾದ ಪ್ರತಾಪ್ ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು, ಮುನಿರತ್ನ, ಆನಂದ್ ಸಿಂಗ್ ಹಾಗೂ ರೋಷನ್ ಬೇಗ್​​ರನ್ನು ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಅನರ್ಹಗೊಳಿಸುವಂತೆ ದೂರು ನೀಡಲಾಗಿದೆ‌ ಎಂದು ವಿವರಿಸಿದ್ದಾರೆ.

ಜುಲೈ 11ರಂದು ಅತೃಪ್ತ ಶಾಸಕರು ಸಂಜೆ 6.15ಕ್ಕೆ ಸ್ಪೀಕರ್ ಕಚೇರಿಗೆ ಖುದ್ದಾಗಿ ಬಂದು‌ ನನಗೆ ಕ್ರಮಬದ್ಧ ರಾಜೀನಾಮೆ ಪತ್ರಗಳನ್ನು ನೀಡಿದ್ದಾರೆ. ಈ ಎಲ್ಲಾ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಅತೃಪ್ತರ ರಾಜೀನಾಮೆ‌ ಪತ್ರಗಳನ್ನು ಅಂಗೀಕರಿಸುವ ಪ್ರಕ್ರಿಯೆಯಲ್ಲಿ ನಾನಿದ್ದು, ನಿಯಮದ ಪ್ರಕಾರ ಈ ಸಂಬಂಧ ನಿರ್ಧಾರವನ್ನು ಕೈಗೊಳ್ಳಲಾಗುವುದು. ಉಳಿದಂತೆ ತಮ್ಮ ಅಫಿಡವಿಟ್​​ನಲ್ಲಿ ಸ್ಪೀಕರ್ ಅತೃಪ್ತರು ನೀಡಿರುವ ರಾಜೀನಾಮೆ ಪತ್ರ ಸಲ್ಲಿಕೆ ಪ್ರಕ್ರಿಯೆ ಸಂಪೂರ್ಣ ಮಾಹಿತಿ ಹಾಗೂ ಅದಕ್ಕನುಸಾರವಾಗಿ ತೆಗೆದುಕೊಂಡ ಕ್ರಮಗಳನ್ನು ದಾಖಲೆಗಳ ಸಮೇತರಾಗಿ ಸುಪ್ರೀಂಕೋರ್ಟ್​ಗೆ ವಿವರ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details