ಬೆಂಗಳೂರು:ನಗರದ ಮಡಿವಾಳ ಬಳಿ ಕ್ಯಾಬ್ ಚಾಲಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಇಬ್ಬರು ಬಾಲಾಪರಾಧಿಗಳು ಗುಜರಾತ್‌ನಲ್ಲಿ ಪತ್ತೆಯಾಗಿದ್ದು, ಮಡಿವಾಳ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉತ್ತರ ಪ್ರದೇಶದಿಂದ ಸುಲಿಗೆ ಮಾಡುವುದಕ್ಕಾಗಿಯೇ ನಗರಕ್ಕೆ ಬಂದಿದ್ದ ಬಾಲಾಪರಾಧಿಗಳು ಏ.17ರಂದು ಬೆಳಗಿನ ಜಾವ ಬೊಮ್ಮನಹಳ್ಳಿ ಸಮೀಪ ಕ್ಯಾಬ್ ಬುಕ್ ಮಾಡಿ ಕ್ಯಾಬ್ ಹತ್ತಿದ್ದಾರೆ. ಮಡಿವಾಳ ಕಡೆಗೆ ಕ್ಯಾಬ್ ಬರುತ್ತಿದ್ದಂತೆ ಹಣ ನೀಡುವಂತೆ ಹೆದರಿಸಿದ್ದಾರೆ. ಹಣ ನೀಡಲು ನಿರಾಕರಿಸಿದ ಚಾಲಕನಿಗೆ ಚಾಕುವಿನಿಂದ ಸುಮಾರು 32 ಕಡೆ ಇರಿದಿದ್ದರು. ಬಳಿಕ 12 ಸಾವಿರ ಹಣ ಕಿತ್ತು ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಲ್ಲಿ ಕ್ಯಾಬ್ ಚಾಲಕನಿಗೆ 32 ಬಾರಿ ಇರಿದು ಸುಲಿಗೆ: ಗುಜರಾತ್‌ನಲ್ಲಿ ಬಾಲಾಪರಾಧಿಗಳು ವಶಕ್ಕೆ - ಕ್ಯಾಬ್ ಚಾಲಕನಿಗೆ ಚಾಕು ಇರಿತ
ಏಪ್ರಿಲ್ 17ರಂದು ಬೆಳಗಿನ ಜಾವ ಬೊಮ್ಮನಹಳ್ಳಿ ಸಮೀಪ ಕ್ಯಾಬ್ ಬುಕ್ ಮಾಡಿ ಕ್ಯಾಬ್ ಹತ್ತಿದ್ದರು. ಮಡಿವಾಳ ಕಡೆಗೆ ಕ್ಯಾಬ್ ಬರುತ್ತಿದ್ದಂತೆ ಹಣ ನೀಡುವಂತೆ ಹೆದರಿಸಿದ್ದಾರೆ. ಹಣ ನೀಡಲು ನಿರಾಕರಿಸಿದ ಚಾಲಕನಿಗೆ ಚಾಕುವಿನಿಂದ ಸುಮಾರು 32 ಕಡೆ ಇರಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಂದು ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಗಾಯಾಳು ಚಾಲಕನನ್ನು ಅಸ್ಪತ್ರೆಗೆ ದಾಖಲು ಮಾಡಿದ್ದರು. ಬಳಿಕ ವಿಚಾರಣೆ ವೇಳೆ ಆರೋಪಿಗಳ ಬಗ್ಗೆ ಜಾಡು ಹಿಡಿದು ಹೊರಟ ಪೊಲೀಸರು, ಯಶವಂತಪುರ ಬಳಿಯಿಂದ ರೈಲು ಹತ್ತಿ ಬಳಿಕ ಆರೋಪಿಗಳು ಓಲಾ ಕ್ಯಾಬ್ ಬುಕ್ ಮಾಡಿದ್ದ ಮೊಬೈಲ್ ನಂಬರ್ ಪತ್ತೆ ಹಚ್ಚಿದ್ದರು. ಅಲ್ಲಿಂದ ಮೊಬೈಲ್ ಟವರ್ ಹಾಗೂ ರೈಲಿನ ಲೊಕೇಶನ್ ಒಟ್ಟಿಗೆ ಬಂದಿತ್ತು. ಹೀಗಾಗಿ ಪೊಲೀಸರ ತಂಡ ಆರೋಪಿಗಳ ಜಾಡು ಹಿಡಿದು ಗುಜರಾತ್ಗೆ ತೆರಳಿ, ಅಲ್ಲಿನ ದಹೇಜ್ ಕೈಗಾರಿಕಾ ಪ್ರದೇಶದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಸಾಲ ತೀರಿಸಲಾಗದ ಕುಡುಕ ಪತಿಯೊಬ್ಬ ತನ್ನ ಪತ್ನಿಯನ್ನೇ ಸಾಲದಾತರಿಗೆ ಒಪ್ಪಿಸಿಬಿಟ್ಟ!