ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಭೀಕರ ಅಪಘಾತ: ಇಬ್ಬರು ಬೈಕ್​ ಸವಾರರಿಗೆ ಗಂಭೀರ ಗಾಯ - ಈಟಿವಿ ಭಾರತ ಕನ್ನಡ

ಬೆಂಗಳೂರಿನಲ್ಲಿ ಕಾರು ಬೈಕ್​ಗೆ ಡಿಕ್ಕಿ ಆಗಿ ಇಬ್ಬರು ಸವಾರರು ಗಂಭೀರ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.

Etv Bharattwo-injured-in-accident-at-bengaluru
Etv Bharatಬೆಂಗಳೂರಲ್ಲಿ ಭೀಕರ ಅಪಘಾತ: ಇಬ್ಬರು ಬೈಕ್​ ಸವಾರರಿಗೆ ಗಂಭೀರ ಗಾಯ

By

Published : Aug 21, 2022, 9:08 PM IST

ಬೆಂಗಳೂರು:ವೇಗವಾಗಿ ಬಂದ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿರುವ ಘಟನೆ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿನ ಮಣಿಪಾಲ್ ಆಸ್ಪತ್ರೆ ಬಳಿ ಸಂಭವಿಸಿದೆ. ಘಟನೆಯಲ್ಲಿ ಬೈಕ್​ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ದ್ವಿಚಕ್ರ ವಾಹನವು ನಜ್ಜುಗುಜ್ಜಾಗಿದೆ.

ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಅಬ್ದುಲ್ ವಾಜೀದ್ ಒಡೆತನದ್ದು ಎನ್ನಲಾದ ಕಾರು ಬೈಕ್​​ಗೆ ಡಿಕ್ಕಿಯಾಗಿದೆ. ಅಬ್ದುಲ್ ವಾಜೀದ್ ಪುತ್ರ ಯಾಯಿದ್ ಅತಿ ವೇಗವಾಗಿ ಕಾರು ಚಲಾಯಿಸುತ್ತಿದ್ದರು ಎಂದು ತಿಳಿದು‌ಬಂದಿದೆ.

ಜಯನಗರದ ನಿವಾಸಿಗಳಾದ ಯಶವಂತ ಹಾಗೂ ನಿಖಿತಾ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳು ಯಶವಂತ್ ಕಾಲಿನ ಮೂಳೆ ಮುರಿದರೆ, ಬೈಕ್ ಹಿಂಬದಿಯಿದ್ದ ನಿಖಿತಾ ಕಾಲಿಗೆ ತೀವ್ರ ಗಾಯವಾಗಿದೆ.

ಜಯನಗರದಿಂದ ವಸಂತನಗರದ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಹೈಗ್ರೌಂಡ್ಸ್​​ ಸಂಚಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ‌. ಈ ಬಗ್ಗೆ ಹೈಗ್ರೌಂಡ್ಸ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಅಪರಿಚಿತ ವಾಹನ ಸ್ಕೂಟರ್​ಗೆ ಡಿಕ್ಕಿ ಮಹಿಳೆ ಸಾವು

ABOUT THE AUTHOR

...view details