ಬೆಂಗಳೂರು:ವಿವಿಧೆಡೆ ಕಳ್ಳತನ ನಡೆಸಿ ತಲೆಮರೆಸಿಕೊಂಡಿದ್ದ ಖದೀಮರನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ನಾಗೇಶ್ ಹಾಗೂ ಚಂದ್ರ ಬಂಧಿತ ಆರೋಪಿಗಳು.
ಸದ್ಯ ಆರೋಪಿಗಳಿಂದ 2 ಬೈಕ್, 152 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಇನ್ನು ಇಬ್ಬರಲ್ಲಿ ನಾಗೇಶ್ ಎಂಬುವರನ್ನು ವಿಚಾರಣೆ ನಡೆಸಿದಾಗ ಈತ ಮಾರತಹಳ್ಳಿ, ಬಂಡೆಹಳ್ಳಿ, ಜಾಲಹಳ್ಳಿ, ವಿ.ವಿ.ಪುರಂ, ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ.