ಕರ್ನಾಟಕ

karnataka

ETV Bharat / state

ದೀಪಾವಳಿ ಕಲೆಕ್ಷನ್​ಗಾಗಿ ಮಂಗಳಮುಖಿಯರ ವಾರ್​​ - ಬೆಂಗಳೂರು ಆರ್​ಎಮ್​ಸಿ ಯಾರ್ಡ್​ ಮಂಗಳಮುಖಿಯರ ಗಲಾಟೆ ಸುದ್ದಿ

ದೀಪಾವಳಿ ಹಬ್ಬದ ನಿಮಿತ್ತ ಶ್ರೀರಾಮ್​ ಪುರದಲ್ಲಿ ಮಂಗಳಮುಖಿಯರು ಮಾರಪ್ಪನ ಪಾಳ್ಯಕ್ಕೆ ಕಲೆಕ್ಷನ್​ಗಾಗಿ ಬಂದು ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದರಂತೆ, ಈ ವಿಚಾರ ತಿಳಿದ ಆರ್​ಎಮ್​ಸಿ ಯಾರ್ಡ್​ ಮಂಗಳಮುಖಿಯರು ವಿರೋಧ ವ್ಯಕ್ತಪಡಿಸಿ ಗಲಾಟೆ ಮಾಡಿ ವಾಪಸ್ ಕಳುಹಿಸಿದ ಘಟನೆ ನಡೆದಿದೆ.

ದೀಪಾವಳಿ ಕಲೆಕ್ಷನ್​ಗಾಗಿ ಮಂಗಳಮುಖಿಯರ ವಾರ್​​

By

Published : Oct 28, 2019, 9:02 PM IST

ಬೆಂಗಳೂರು : ದೀಪಾವಳಿ ಕಲೆಕ್ಷನ್ ವಿಚಾರವಾಗಿ ಮಂಗಳಮುಖಿಯರ ಗುಂಪುಗಳ ನಡುವೆ ಪರಸ್ಪರ ಮಾರಾಮಾರಿ ನಡೆದಉ ಹೊಡೆದಾಡಿಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಇದೆ 25 ರಂದು ದೀಪಾವಳಿ ಹಬ್ಬದ ನಿಮಿತ್ತ ಶ್ರೀರಾಮ್​ ಪುರ ಮಂಗಳಮುಖಿಯರು ಮಾರಪ್ಪನ ಪಾಳ್ಯಕ್ಕೆ ಕಲೆಕ್ಷನ್ ಗಾಗಿ ಬಂದು ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದರಂತೆ, ಈ ವಿಚಾರ ತಿಳಿದ ಆರ್​ಎಮ್​ಸಿ ಯಾರ್ಡ್​ ಮಂಗಳಮುಖಿಯರು ವಿರೋಧ ವ್ಯಕ್ತಪಡಿಸಿ ಗಲಾಟೆ ಮಾಡಿ ಕಳುಹಿಸಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಶ್ರೀರಾಮ್​ ಪುರ ಮಂಗಳಮುಖಿಯರು ಗ್ಯಾಂಗ್​ ಸಮೇತ ಬಂದು ವಾಣಿಶ್ರೀ ಮತ್ತು ಪ್ರೀಯ ಎಂಬ ಮಂಗಳಮುಖಿಯರ ಕೇಶರಾಶಿಯನ್ನು ಕತ್ತರಿಸಿದ್ದಾರೆ. ಅಲ್ಲದೆ ಸದಸ್ಯರ ಮೇಲೆ ಮಚ್ಚು ಲಾಂಗು ಗಳಿಂದ ಹಲ್ಲೆ ಮಾಡಲು ಯತ್ನಿಸಿ ಅವರ ಬಳಿ ಇದ್ದ ಹಣ ಮತ್ತು ಚಿನ್ನಾಭರಣಗಳನ್ನು ಕದ್ದು ಎಸ್ಕೇಪ್ ಆಗಿದ್ದರು. ಇನ್ನು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಗಲಾಟೆಯ ಕುರಿತು ಆರ್ ಎಮ್ ಸಿ ಯಾರ್ಡ್ ಮಂಗಳಮುಖಿಯರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯ ವೀಕ್ಷಿಸಿದ ಪೊಲೀಸರು ಪ್ರಕರಣ ದಾಖಲಿಸಿ ಸುಮಿತ್ರಾ, ರೇಣುಕಾ, ಬಬ್ಲಿ ಸೇರಿದಂತೆ 12 ಜನ ಮಂಗಳಮುಖಿಯರನ್ನು ಬಂಧಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details