ಬೆಂಗಳೂರು:ನಗರದ ಲಗ್ಗೆರೆಯ ಬಾರ್‌ವೊಂದರಲ್ಲಿ ಎರಡು ಗ್ಯಾಂಗ್ಗಳ ನಡುವೆ ಮಚ್ಚು ಮತ್ತು ಬಿಯರ್ ಬಾಟಲಿಗಳಿಂದ ಹೊಡೆದಾಟ ನಡೆದಿದೆ.
ಬೆಟ್ಟಿಂಗ್ ವಿಚಾರಕ್ಕೆ ಬಾರ್ನಲ್ಲಿ ಗಲಾಟೆ: ಮಚ್ಚು, ಬಿಯರ್ ಬಾಟಲಿಗಳಲ್ಲಿ ಹೊಡೆದಾಟ - ಈಟಿವಿ ಭಾರತ್ ಕನ್ನಡ
ಬೆಟ್ಟಿಂಗ್ ವಿಚಾರವಾಗಿ ಬೆಂಗಳೂರಿನ ಬಾರೊಂದರಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಘಟನೆಯ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ.
ಬೆಟ್ಟಿಂಗ್ ವಿಚಾರಕ್ಕಾಗಿ ಬಾರ್ನಲ್ಲಿ ಎರಡು ಗ್ಯಾಂಗ್ಗಳ ಗಲಾಟೆ
ಮೂರು ದಿನಗಳ ಹಿಂದೆ ಇಲ್ಲಿನ ಸನ್ ರೈಸ್ ಬಾರ್ಗೆ ನುಗ್ಗಿದ ಇಬ್ಬರು ಪುಂಡರು ಚೀಲದಿಂದ ಲಾಂಗ್ ಹೊರತೆಗೆದಿದ್ದಾರೆ. ಮದ್ಯ ಸೇವಿಸುತ್ತಿದ್ದ ರೌಡಿಶೀಟರ್ ಐಕಾನ್ ರಾಜು ಮತ್ತು ಆತನ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಐಕಾನ್ ರಾಜು ಹಾಗು ಸ್ನೇಹಿತ ಬಿಯರ್ ಬಾಟಲಿಯಿಂದ ಪ್ರತಿಯಾಗಿ ಹಲ್ಲೆ ಮಾಡಿ ಎದುರಾಳಿ ಗ್ಯಾಂಗ್ ಅನ್ನು ಹಿಮ್ಮೆಟ್ಟಿಸಿದ್ದಾರೆ.
ಇದನ್ನೂ ಓದಿ :ಬೆಳಗಾವಿ: ಹೆಸ್ಕಾಂ ಆವರಣದಲ್ಲಿ ನೇಣಿಗೆ ಶರಣಾದ ನೌಕರ