ಬೆಂಗಳೂರು: ಡ್ರಗ್ಸ್ ಖರೀದಿಸುವ ಸೋಗಿನಲ್ಲಿ ಶಂಕರಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ವಿದೇಶಿ ಡ್ರಗ್ಸ್ ಪೆಡ್ಲರ್ಸ್ಅನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನು ನೈಜೀರಿಯಾ ಮೂಲದ ತಾನೂಸೆಕಾ, ಎಗ್ವಾತು ಇಪೇನಿ ಎಂದು ಗುರುತಿಸಲಾಗಿದೆ.
ಬಂಧಿತ ವಿದೇಶಿ ಪ್ರಜೆಗಳಿಂದ ಸುಮಾರು 33 ಲಕ್ಷ ಮೌಲ್ಯದ ನಿಷೇಧಿತ 1.1 ಕೆಜಿ ಡ್ರಗ್ಸ್ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಐಟಿ ಬಿಟಿ ಸೆಕ್ಟರ್ ಗಳ ಭಾಗದಲ್ಲೇ ಹೆಚ್ಚಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಗಳು, ಪೋಸ್ಟ್ ಆಫೀಸು, ಡಾರ್ಕ್ ವೆಬ್, ಕೋರಿಯರ್ ಮೂಲಕ ಡ್ರಗ್ ಖರೀದಿಸುತ್ತಿದ್ದರು ಎಂದು ತಿಳಿದುಬಂದಿದೆ.