ಬೆಂಗಳೂರು: ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ 16 ಕ್ಷೇತ್ರಗಳಲ್ಲಿ 2 ಮತಯಂತ್ರಗಳನ್ನು ಬಳಸಲಾಗುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು. ಅದರಂತೆ ಸೋಮವಾರ 517 ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸು ಪಡೆದು ಕಣದಿಂದ ಹಿಂದೆ ಸರಿದ್ದಾರೆ. ಆ ಮೂಲಕ ಸದ್ಯ ಕಣದಲ್ಲಿ ಒಟ್ಟು 2,613 ಅಭ್ಯರ್ಥಿಗಳಿದ್ದಾರೆ.
ಒಟ್ಟು 16 ಕ್ಷೇತ್ರಗಳಲ್ಲಿ 16ಕ್ಕೂ ಅಧಿಕ ಅಭ್ಯರ್ಥಿಗಳು ಕಣದಲ್ಲಿ ಸ್ಪರ್ಧಿಸಲಿದ್ದಾರೆ. ಹೀಗಾಗಿ 16 ಕ್ಷೇತ್ರಗಳಲ್ಲಿ ಎರಡೆರಡು ಮತಯಂತ್ರಗಳನ್ನು ಬಳಸಲಾಗುವುದು. ಒಂದು ಇವಿಎಂನಲ್ಲಿ ಗರಿಷ್ಠ 16 ಅಭ್ಯರ್ಥಿಗಳನ್ನು ಹೆಸರು ಹಾಗೂ ಚಿಹ್ನೆಗೆ ವ್ಯವಸ್ಥೆ ಇರುತ್ತದೆ. ಅದಕ್ಕಿಂತ ಹೆಚ್ಚುತ್ತಾ ಹೋದಂತೆ ಪ್ರತಿ 16 ಅಭ್ಯರ್ಥಿಗಳಿಗೆ ಒಂದರಂತೆ ಹೆಚ್ಚುವರಿ ಮತಯಂತ್ರಗಳ ಸಂಪರ್ಕ ಕಲ್ಪಿಸಬೇಕು. ಈ ಬಾರಿ 16ಕ್ಕೂ ಅಧಿಕ ಅಭ್ಯರ್ಥಿಗಳು ಒಟ್ಟು 16 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ಹೀಗಾಗಿ ಆ 16 ಕ್ಷೇತ್ರಗಳಲ್ಲಿ ಎರಡೆರಡು ಮತಯಂತ್ರಗಳನ್ನು ಬಳಸಲಾಗುತ್ತದೆ. ಬಳ್ಳಾರಿ ನಗರದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 24 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಬಳಿಕದ ಸ್ಥಾನ ಹೊಸಕೋಟೆಗೆ ಬರುತ್ತದೆ. ಅಲ್ಲಿ ಈ ಬಾರಿ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಳಿಕ ಚಿತ್ರದುರ್ಗದಲ್ಲಿ 21 ಅಭ್ಯರ್ಥಿಗಳು, ಬೆಂಗಳೂರಿನ ಯಲಹಂಕದಲ್ಲಿ 20 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.
ಯಾವ ಕ್ಷೇತ್ರಗಳಲ್ಲಿ ಎರಡೆರಡು ಮತಯಂತ್ರ ಬಳಕೆ?:
ರಾಜಾಜಿ ನಗರ- 18 ಅಭ್ಯರ್ಥಿಗಳು
ಹೊಸಕೋಟೆ- 23 ಅಭ್ಯರ್ಥಿಗಳು
ಯಲಹಂಕ- 20 ಅಭ್ಯರ್ಥಿಗಳು
ಬ್ಯಾಟರಾಯನಪುರ- 17 ಅಭ್ಯರ್ಥಿಗಳು
ಬಳ್ಳಾರಿ ನಗರ- 24 ಅಭ್ಯರ್ಥಿಗಳು
ಹನೂರು- 18 ಅಭ್ಯರ್ಥಿಗಳು
ಗೌರಿಬಿದನೂರು- 18 ಅಭ್ಯರ್ಥಿಗಳು
ಚಿಕ್ಕಮಗಳೂರು- 16 ಅಭ್ಯರ್ಥಿಗಳು