ಬೆಂಗಳೂರು:ತಮಿಳುನಾಡು ಹಾಗೂ ಕರ್ನಾಟಕ ಗಡಿಭಾಗದಲ್ಲಿ ಸುಮಾರು ಆರು ಜನರನ್ನು ಬಲಿ ತೆಗೆದುಕೊಂಡಿದ್ದ ಎರಡು ಕಾಡಾನೆಗಳು ತಮಿಳುನಾಡಿನ ಗಡಿಭಾಗದ ಬಾಗಲೂರು ರಸ್ತೆಯ, ಬೆಳ್ತೂರು ತೋಪಿನಲ್ಲಿ ಕಾಣಿಸಿಕೊಂಡಿವೆ.
ಇಂದು ತಮಿಳುನಾಡಿನ ಗಡಿಭಾಗದ ಬಾಗಲೂರು ರಸ್ತೆಯ ಬೆಳ್ತೂರು ತೋಪಿನಲ್ಲಿ ಕಾಣಿಸಿಕೊಂಡಿವೆ. ಕಳೆದ ಎರಡು ದಿನಗಳ ಹಿಂದೆ ಕರ್ನಾಟಕದ ಗಡಿಭಾಗವಾದ ತಿರುವರಂಗ ಎಂಬ ಗ್ರಾಮದ ನಿವಾಸಿ ಅಣ್ಣಯ್ಯಪ್ಪ ಎಂಬಾತನನ್ನು ಕಾಡಾನೆಗಳು ಬಲಿ ಪಡೆದುಕೊಂಡಿದ್ದವು. ಈ ಘಟನೆಯಿಂದ ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.