ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ ಜಾಲದ ನಂಟು ಆರೋಪ ಪ್ರಕರಣದ ನಂಟು ಹೊಂದಿದ್ದ ಪೆಡ್ಲರ್ನ್ನು ವೈಟ್ ಫೀಲ್ಡ್ ವಿಭಾಗದ ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ಡ್ರಗ್ಸ್ ಪ್ರಕರಣ: ಬೆಂಗಳೂರಲ್ಲಿ ಮತ್ತಿಬ್ಬರು ಪೆಡ್ಲರ್ಗಳ ಬಂಧನ - Drug pedlers arrest in Bangalore
ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆಯ ಕೊಡಿಗೇಹಳ್ಳಿ ರೈಲ್ವೆ ಸ್ಟೇಷನ್ ರಸ್ತೆಯ ಬಳಿ ಗಿರಾಕಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವೇಳೆ ವಿಟಿ @ಚಿಕ್ವಡಿಸಿ ವಿನ್ಸೆಂಟ್ ಒಗಿಬೋ ಮತ್ತು ಎಮೆಕಾ ಚಿನೆಡು ಮೈಕೆಲ್ ಎಂಬುವರನ್ನು ಬಂಧಿಸಲಾಗಿದೆ.
ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆಯ ಕೊಡಿಗೇಹಳ್ಳಿ ರೈಲ್ವೆ ಸ್ಟೇಷನ್ ರಸ್ತೆಯ ಬಳಿ ಬೈಕ್ ನಿಲ್ಲಿಸಿಕೊಂಡು ಬ್ಯಾಗ್ನಲ್ಲಿ ಗಾಂಜಾ ಮತ್ತು ಕೆಮಿಕಲ್ ಮಾದಕ ವಸ್ತುಗಳನ್ನ ದಾರಿಯಲ್ಲಿ ಹೋಗುವ ಸಾರ್ವಜನಿಕರು, ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ. ಈ ವೇಳೆ ವಿಟಿ @ಚಿಕ್ವಡಿಸಿ ವಿನ್ಸೆಂಟ್ ಒಗಿಬೋ ಮತ್ತು ಎಮೆಕಾ ಚಿನೆಡು ಮೈಕೆಲ್ ಎಂಬುವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 300 ಗ್ರಾಂ ಗಾಂಜಾ, ಎಂಡಿಎಂಎ ಹಾಗೂ ಕೆಮಿಕಲ್ ಡ್ರಗ್, ನಾಲ್ಕು ಮೊಬೈಲ್, ತೂಕ ಮಾಡುವ ಯಂತ್ರ, ಯಮಹಾ ಎಪ್ಜೆಡ್ ಮೋಟಾರ್ ಸೈಕಲ್ ಮತ್ತು ನಗದು ವಶಪಡಿಸಿಕೊಂಡಿದ್ದಾರೆ. ಹಾಗೆ ಸದ್ಯ ಬಂಧಿತ ಪ್ರಮುಖ ಆರೋಪಿ ವಿಟಿ ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ಡ್ರಗ್ಸ್ ಪೆಡ್ಲರ್ಗಳ ಜೊತೆ ನಂಟು ಹೊಂದಿರುವ ಆಧಾರದ ಮೇರೆಗೆ ತನಿಖೆ ಮುಂದುವರೆಸಿದ್ದಾರೆ.