ಕರ್ನಾಟಕ

karnataka

ETV Bharat / state

ನಗರ ಪೊಲೀಸರಿಂದ ಇಬ್ಬರು ಡ್ರಗ್ಸ್​ ಪೆಡ್ಲರ್​​ಗಳ ಬಂಧನ: 2.50 ಕೋಟಿ ರೂ. ಮೊತ್ತದ ಕೊಕೇನ್ ಬ್ರೌನ್ ಶುಗರ್ ವಶ - ಬೆಂಗಳೂರಿನಲ್ಲಿ ಇಬ್ಬರು ಡ್ರಗ್ಸ್​ ಪೆಡ್ಲರ್​​ಗಳ ಬಂಧನ

ಆರೋಪಿ ಬ್ರೆಜಿಲ್ ದೇಶದಿಂದ ರಾಷ್ಟ್ರ ರಾಜಧಾನಿ ಕೊಕೇನ್​​​ ದೆಹಲಿಗೆ ಕಳ್ಳಸಾಗಣೆ ಮಾಡಿಕೊಂಡು ಬರುತ್ತಿದ್ದ. ನಂತರ ದೆಹಲಿಯಿಂದ ಕೊಕೇನ್​​ ಬೆಂಗಳೂರಿಗೆ ತಂದು ನಗರದಲ್ಲಿ ವಾಸವಾಗಿರುವ ನೈಜೀರಿಯಾದ ಗಿರಾಕಿಗಳಿಗೆ, ಸೆಲೆಬ್ರಿಟಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದನಂತೆ.

ಡ್ರಗ್ಸ್​ ಪೆಡ್ಲರ್​​ಗಳ ಬಂಧನ
ಡ್ರಗ್ಸ್​ ಪೆಡ್ಲರ್​​ಗಳ ಬಂಧನ

By

Published : Feb 15, 2022, 9:32 PM IST

Updated : Feb 15, 2022, 10:54 PM IST

ಬೆಂಗಳೂರು : ಪೂರ್ವ ವಿಭಾಗದ ಗೋವಿಂದಪುರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ, ಬಂಧಿತರಿಂದ 2 ಕೋಟಿ 51 ಲಕ್ಷ ರೂಪಾಯಿ ಮೌಲ್ಯದ ಕೊಕೇನ್ ಹಾಗೂ ಬ್ರೌನ್ ಶುಗರ್ ವಶಪಡಿಸಿಕೊಂಡಿದ್ದಾರೆ.

ಬ್ರೆಜಿಲ್ ದೇಶದಿಂದ ಕೊಕೇನ್ ಸಾಗಣೆ:ಕೊಕೇನ್​ ಕಳ್ಳಸಾಗಣೆ ಮುಖಾಂತರ ಬೆಂಗಳೂರಿಗೆ ತಂದು ಸೆಲೆಬ್ರಿಟಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಯಾದ ಚಿಬುಜಿ ಚಿನೊಂಸೋ ಬಂಧಿಸಿರುವ ಪೊಲೀಸರು,1 ಕೋಟಿ 30 ಲಕ್ಷ ಮೌಲ್ಯದ 910 ಗ್ರಾಂ. ಕೊಕೇನ್ ಸೀಜ್ ಮಾಡಿದ್ದಾರೆ.

ನಗರ ಪೊಲೀಸರಿಂದ ಇಬ್ಬರು ಡ್ರಗ್ಸ್​ ಪೆಡ್ಲರ್​​ಗಳ ಬಂಧನ

ಆರೋಪಿಯು ಬ್ರೆಜಿಲ್ ರಾಷ್ಟ್ರ ರಾಜಧಾನಿಯಿಂದ ಕೊಕೇನ್​​​ ದೆಹಲಿಗೆ ಕಳ್ಳಸಾಗಣೆ ಮಾಡಿಕೊಂಡು ಬರುತ್ತಿದ್ದ. ನಂತರ ದೆಹಲಿಯಿಂದ ಕೊಕೇನ್​​ ಬೆಂಗಳೂರಿಗೆ ತಂದು ನಗರದಲ್ಲಿ ವಾಸವಾಗಿರುವ ನೈಜೀರಿಯಾದ ಗಿರಾಕಿಗಳಿಗೆ, ಸೆಲೆಬ್ರಿಟಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದನಂತೆ.

1 ಕೋಟಿ 30 ಲಕ್ಷ ಮೌಲ್ಯದ 910 ಗ್ರಾಂ. ಕೊಕೇನ್ ಸೀಜ್

ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ತನಿಖೆ ಕೈಗೊಂಡು, ಎಚ್‌ಎಸ್‌ಆರ್ ಲೇಔಟ್, 4ನೇ ಬ್ಲಾಕ್‌ ಕೈಟ್ಸ್ ಸೀನಿಯರ್ ಕೇರ್, 1ನೆ ಹಂತ, 4ನೆ ಬ್ಲಾಕ್‌ನ ಫಾರೆಸ್ಟ್ ಕಚೇರಿ ಎದುರು ಹೆಣ್ಣೂರು ಬಂಡೆಯ ನಿವಾಸಿಯನ್ನು ಬಂಧಿಸಿ ಆತನಿಂದ 910 ಗ್ರಾಂ ಕೊಕೇನ್, ತೂಕದ ಯಂತ್ರ, ಗೋಲ್ಡ್ ಮಾಡೆಲ್ ಎಂ ಹೆಸರಿನ ಚಿಕ್ಕ ಚಿಕ್ಕ ಖಾಲಿ ಕವರ್‌ಗಳು, ಹೋಂಡಾ ಡಿಯೋ ಬೈಕ್ ವಶಪಡಿಸಿಕೊಂಡಿದ್ದಾರೆ.

50 ಸಾವಿರ ಬಹುಮಾನ: ಅಧಿಕಾರಿ ಮತ್ತು ಸಿಬ್ಬಂದಿಗಳ ಈ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಶ್ಲಾಘಿಸಿ, 50 ಸಾವಿರ ಬಹುಮಾನ ಘೋಷಿಸಿದ್ದಾರೆ.

ಬ್ರೌನ್‌ ಶುಗರ್‌ ವಶ:ಮಾದಕ ವಸ್ತು ಬ್ರೌನ್ ಶುಗರ್ ಮಾರಾಟ ಮಾಡುತ್ತಿದ್ದ ಶ್ರೀಕಾಂತ್ ಎಂಬ ಆರೋಪಿಯನ್ನ ಬಂಧಿಸಿರುವ ಗೋವಿಂದಪುರ ಠಾಣೆಯ ಪೊಲೀಸರು, ಆತನಿಂದ 1 ಕೋಟಿ 21 ಲಕ್ಷ ಮೌಲ್ಯದ 2 ಕೆಜಿ 428 ಗ್ರಾಂ ಬ್ರೌನ್ ಶುಗರ್ ವಶಪಡಿಸಿಕೊಂಡಿದ್ದಾರೆ.

1 ಕೋಟಿ 21 ಲಕ್ಷ ಮೌಲ್ಯದ 2 ಕೆಜಿ 428 ಗ್ರಾಂ ಬ್ರೌನ್ ಶುಗರ್ ವಶ

ಈತ ನಾಗವಾರದ ವೈಯಾಲಿಕಾವಲ್, ಎಚ್‌ಬಿಸಿಎಸ್ ಲೇಔಟ್, 80 ಅಡಿ ರಸ್ತೆಯ ಇಂದಿರಾ ಕ್ಯಾಂಟಿನ್ ಬಳಿ ಮಾದಕ ವಸ್ತು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತನಿಖೆ ಕೈಗೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ 500 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಈತನನ್ನು ಹೆಚ್ಚಿನ ವಿಚಾರಣೆಗೋಳಪಡಿಸಿದಾಗ ಅಕ್ರಮವಾಗಿ ಹಣ ಸ೦ಪಾದಿಸುವ ಉದ್ದೇಶದಿಂದ ಮಾದಕ ವಸ್ತು ಗಾಂಜಾವನ್ನು ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶ ರಾಜ್ಯಗಳಿಂದ ಖರೀದಿಸಿ, ಬೆಂಗಳೂರಿಗೆ ಕಳ್ಳಸಾಗಣೆ ಮಾಡಿಕೊಂಡು ಬಂದು ತನ್ನ ಗಿರಾಕಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸರಬರಾಜು ಮಾಡುತ್ತಿದ್ದುದಾಗಿ ತಿಳಿಸಿದ್ದಾನೆ.

ತನಿಖೆ ಮುಂದುವರೆಸಿರುವ ಪೊಲೀಸ್ ಸಿಬ್ಬಂದಿಗಳ ಎರಡು ತಂಡಗಳಾಗಿ ವಿಂಗಡಿಸಿ ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಶೋಧ ನೆಡೆಸಲಾಗಿತ್ತು.

ಇದನ್ನು ಓದಿ:ಲಖೀಂಪುರ ಖೇರಿ ಹಿಂಸಾಚಾರದಲ್ಲಿ ಬಂಧಿತನಾಗಿದ್ದ ಕೇಂದ್ರ ಸಚಿವರ ಪುತ್ರ ಆಶಿಶ್​ ಮಿಶ್ರಾಗೆ ಜಾಮೀನು, ಬಿಡುಗಡೆ

ಆರೋಪಿಯು ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆಯ ವರಡ್ ತಾಲೂಕಿನಲ್ಲಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿ ಬಂಧಿಸಿ, ಪ್ಲಾಸ್ಟಿಕ್‌ ಕವರ್‌ನಲ್ಲಿದ್ದ ಬ್ರೌನ್‌ಶುಗರ್ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದರ ಮೌಲ್ಯ 1 ಕೋಟಿ 21 ಲಕ್ಷ ರೂ ಎಂದು ಅಂದಾಜಿಸಲಾಗುತ್ತಿದೆ.

75 ಸಾವಿರ ಬಹುಮಾನ: ಅಧಿಕಾರಿ ಮತ್ತು ಸಿಬ್ಬಂದಿಯ ಈ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶ್ಲಾಘಿಸಿ 75 ಸಾವಿರ ರೂ ಬಹುಮಾನ ಘೋಷಿಸಿದ್ದಾರೆ.

Last Updated : Feb 15, 2022, 10:54 PM IST

For All Latest Updates

ABOUT THE AUTHOR

...view details