ಬೆಂಗಳೂರು: ಟೈಡಾಲ್ ಟ್ಯಾಬ್ಲೆಟ್ ಡ್ರಗ್ಸ್ ಮಾದರಿ ಬಳಸಿ ಇಬ್ಬರು ಯುವಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಡಿಕಲ್ ಶಾಪ್ ಮಾಲೀಕನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.
ಟೈಡಾಲ್ ಡ್ರಗ್ಸ್ ಬಳಸಿ ಇಬ್ಬರು ಮೃತಪಟ್ಟ ಪ್ರಕರಣ: ಮೆಡಿಕಲ್ ಶಾಪ್ ಮಾಲೀಕನ ಬಂಧನ - ಬೆಂಗಳೂರು ಮೆಡಿಕಲ್ ಶಾಪ್ ಮಾಲೀಕನ ಬಂಧನ
ಟೈಡಾಲ್ ಟ್ಯಾಬ್ಲೆಟ್ ಡ್ರಗ್ಸ್ ಮಾದರಿ ಬಳಸಿ ಇಬ್ಬರು ಯುವಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಡಿಕಲ್ ಶಾಪ್ ಮಾಲೀಕನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.
![ಟೈಡಾಲ್ ಡ್ರಗ್ಸ್ ಬಳಸಿ ಇಬ್ಬರು ಮೃತಪಟ್ಟ ಪ್ರಕರಣ: ಮೆಡಿಕಲ್ ಶಾಪ್ ಮಾಲೀಕನ ಬಂಧನ](https://etvbharatimages.akamaized.net/etvbharat/prod-images/768-512-5151338-thumbnail-3x2-net.jpg)
ಮೆಡಿಕಲ್ ಶಾಪ್ ಮಾಲೀಕ ಮನೀಶ್ ಕುಮಾರ್ ಬಂಧಿತ ಆರೋಪಿ. ನವೆಂಬರ್ 20ರಂದು ವೈಯಾಲಿಕಾವಲ್ನ ಅಭಿಷೇಕ್ ಮತ್ತು ಗೋಪಿ ಮೃತಪಟ್ಟಿದ್ದರು. ಸಾವಿಗೂ ಮುನ್ನ ಅಂದರೆ ನ. 17ರಂದು ಮೃತ ಗೋಪಿ ರಾಜಾಜಿನಗರದ ಮನ್ ದೀಪ್ ಫಾರ್ಮ್ಗೆ ತೆರಳಿ ಟೈಡಾಲ್ ಟ್ಯಾಬ್ಲೆಟ್, ಸಿರಿಂಜ್, ಡಿಸ್ಟಿಲ್ ವಾಟರ್ ಖರೀದಿಸಿದ್ದಾರೆ. ಬಳಿಕ ವೈಯಾಲಿಕಾವಲ್ನಲ್ಲಿರುವ ಸ್ನೇಹಿತ ಅಭಿಷೇಕ್ ಮನೆಯಲ್ಲಿ ಮೂವರು ಸ್ನೇಹಿತರು ಡಿಸ್ಟಿಲ್ ವಾಟರ್ನಲ್ಲಿ ಕ್ರಶ್ ಮಾಡಿ ಸಿರಿಂಜ್ ಮೂಲಕ ಇಂಜೆಕ್ಟ್ ಮಾಡಿಕೊಂಡಿದ್ದರು. ಅಧಿಕ ಪ್ರಮಾಣದಲ್ಲಿ ಡೋಸೆಜ್ ಅಂಶ ಇದ್ದ ಹಿನ್ನೆಲೆ ಅಸ್ವಸ್ಥಗೊಂಡು ಅಭಿಷೇಕ್ ಮತ್ತು ಗೋಪಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಇದೇ ಮಾದರಿಯಲ್ಲಿ ಸುಹಾಸ್ ಎಂಬುವನಿಗೆ ಸ್ನೇಹಿತ ಗೋಪಿ ಇಂಜೆಕ್ಟ್ ಮಾಡಿದ್ದ. ಇದರಿಂದ ಅಸ್ವಸ್ಥಗೊಂಡು ಸುಹಾಸ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುಹಾಸ್ ನೀಡಿದ ಹೇಳಿಕೆ ಮೇರೆಗೆ ಮೆಡಿಕಲ್ ಶಾಪ್ ಮಾಲೀಕ ಮನೀಶ್ ಕುಮಾರ್ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.