ಬೆಂಗಳೂರು: ಶಿಥಿಲಾವಸ್ಥೆಯ ಕಾಂಪೌಂಡ್ ಕುಸಿದು ಇಬ್ಬರು ಸಾವನ್ನಪ್ಪಿರುವ ಘಟನೆ ಇಲ್ಲಿನ ದೀಪಾಂಜಲಿ ನಗರದ ಜಂಕ್ಷನ್ ಬಳಿ ಸಂಭವಿಸಿದೆ. ರಾಜಮಣಿ (35), ಬಾಲು (30) ಮೃತರು. ಇವರು ವಾಲ್ಮೀಕಿ ನಗರ ನಿವಾಸಿಗಳು ಎಂದು ತಿಳಿದು ಬಂದಿದೆ.
ಮಳೆಯ ಅಬ್ಬರ: ಶಿಥಿಲಾವಸ್ಥೆಯ ಕಾಂಪೌಂಡ್ ಕುಸಿದು ಇಬ್ಬರ ಸಾವು
ಮಳೆಗೆ ನೆನೆದು ಶಿಥಿಲಾವಸ್ಥೆಯಲ್ಲಿದ್ದ ಕಾಂಪೌಂಡ್ ಹಠಾತ್ ಕುಸಿದ-ಇಬ್ಬರು ಸ್ಥಳದಲ್ಲೇ ಸಾವು- ಬೆಂಗಳೂರಲ್ಲಿ ದುರ್ಘಟನೆ
ಶಿಥಿಲಾವಸ್ಥೆಯ ಕಾಂಪೌಂಡ್ ಕುಸಿದು ಇಬ್ಬರ ಸಾವು
ನಗರದಲ್ಲಿ ಕಳೆದ ಎರಡು ವಾರಗಳಿಂದ ಮಳೆಯಾಗುತ್ತಿದೆ. ಮಳೆಗೆ ನೆನೆದು ಶಿಥಿಲಾವಸ್ಥೆಯಲ್ಲಿದ್ದ ಕಾಂಪೌಂಡ್ ಹಠಾತ್ ಕುಸಿದು ಬಿದ್ದಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರು.