ಬೆಂಗಳೂರು:ಕೊರೊನಾ ವೈರಸ್ ಬೆಂಗಳೂರಿಗರನ್ನ ಬಿಟ್ಟೂ ಬಿಡದಂತೆ ಕಾಡುತ್ತಿದೆ.. ಇಂದು ಮತ್ತೊಬ್ಬ ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.
ಬೆಂಗಳೂರಿನಲ್ಲಿ ಇಂದು ಮತ್ತಿಬ್ಬರು ಬಲಿ: ಮತ್ತೊಬ್ಬ ಡಾಕ್ಟರ್ಗೆ ಕೊರೊನಾ ಪಾಸಿಟಿವ್
ಬೆಂಗಳೂರಿನಲ್ಲಿ ಇಂದು ಕೊರೊನಾಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಜೊತೆಗೆ ಚಿಕ್ಕಪೇಟೆಯಲ್ಲಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜಯನಗರ ನಿವಾಸಿಯಾಗಿರುವ ವೈದ್ಯ, ಚಿಕ್ಕಪೇಟೆಯಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದರು. ಕೆಲ ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ರೋಗಿಗೆ ಚಿಕಿತ್ಸೆ ನೀಡಿದ್ದ ಕಾರಣ, ಅವರಿಂದ ಕೊರೊನಾ ಬಂದಿರುವ ಶಂಕೆ ಇದೆ. ಸದ್ಯ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಸಂಪರ್ಕ ಪತ್ತೆ ಹಚ್ಚುತ್ತಿದ್ದಾರೆ..
ಇತ್ತ ಉಳ್ಳಾಲದಲ್ಲಿ ಗರ್ಭಿಣಿಯೊಬ್ಬರಿಗೆ ಕೊರೊನಾ ದೃಢವಾಗಿದ್ದು, ಮಾಸಿಕ ಪರೀಕ್ಷೆ ವೇಳೆ ಕೊರೊನಾ ಟೆಸ್ಟ್ ಮಾಡಲಾಗಿತ್ತು.. ಈ ವೇಳೆ ಕೊರೊನಾ ದೃಢಪಟ್ಟಿದೆ.. ಇನ್ನು ಗರ್ಭಿಣಿಯರಿಗೆ ಕೊರೊನಾ ಟೆಸ್ಟ್ ಮಾಡಿಸುವುದು ಕಡ್ಡಾಯ ಮಾಡಲಾಗಿದೆ.
''ಕೊರೊನಾಗೆ ಬೆಂಗಳೂರಿನಲ್ಲಿ ಮತ್ತಿಬ್ಬರು ಬಲಿ''
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.. ನಿನ್ನೆ ಒಂದೇ ದಿನ ವಿಕ್ಟೋರಿಯಾದಲ್ಲಿ ನಾಲ್ಕು ಸಾವಾಗಿದ್ದವು.. ನಿನ್ನೆ ಮಧ್ಯಾಹ್ನ 1, ಸಂಜೆ 2 ಸಾವುಗಳು ಸಂಭವಿಸಿದ್ದು, ನಂತರ ರಾತ್ರಿ ಮತ್ತೆ ಇಬ್ಬರು ರೋಗಿಗಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. 61 ವರ್ಷದ ಮಹಿಳೆ, 57 ವರ್ಷದ ಪುರುಷ ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಇವರಲ್ಲಿ ಒಬ್ಬರನ್ನು ರಾಜೀವ್ ಗಾಂಧಿ ಆಸ್ಪತ್ರೆ, ಮತ್ತೊಬ್ಬರನ್ನು ಸೆಂಟ್ ಮಾರ್ಥಾಸ್ ಆಸ್ಪತ್ರೆಯಿಂದ ಶಿಫ್ಟ್ ಮಾಡಲಾಗಿತ್ತು.