ಆನೇಕಲ್ :ಎರಡು ದಿನದಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರಿಂದ ವಸತಿ ಸಂಕೀರ್ಣದ ನಿವಾಸಿಗಳಲ್ಲಿ ಕೋವಿಡ್ ಭೀತಿ ಕಾಡುತ್ತಿದೆ.
ಆನೇಕಲ್-ಅತ್ತಿಬೆಲೆ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಎಂ. ಮೇಡಹಳ್ಳಿ ಬಳಿಯ ಜನಾಧಾರ್ ಶುಭಾ ಅಪಾರ್ಟ್ಮೆಂಟ್ ಆವರಣದಲ್ಲಿ ನಿನ್ನೆ ಸಾಯಿ (32) ಎಂಬಾತ ಗೋವಾ ಮೂಲದ ವ್ಯಕ್ತಿ ಸಾವನ್ನಪ್ಪಿದ್ದರು. 15 ದಿನದ ಹಿಂದೆ ಬಾಡಿಗೆಗೆ ಬಂದಿದ್ದು ಏಕಾಏಕಿ ಸಾವನ್ನಪ್ಪಿದ್ದು, ಕೋವಿಡ್ ಸೋಂಕು ಎಂಬ ವದಂತಿ ಹಬ್ಬಿತ್ತು. ಅದರ ಬೆನ್ನಲ್ಲೇ ಇಂದು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಒಂದೇ ಅಪಾರ್ಟ್ಮೆಂಟ್ನಲ್ಲಿ ಇಬ್ಬರು ಸಾವನ್ನಪ್ಪಿದ್ದರಿಂದ ನಿವಾಸಿಗಳಲ್ಲಿ ಸಹಜವಾಗಿ ಆತಂಕ ಮನೆ ಮಾಡಿದೆ.