ಬೆಂಗಳೂರು: ಕೋವಿಡ್ ಸೋಂಕಿನಿಂದ ಕಂಗೆಟ್ಟಿರುವ ಜನಸಾಮಾನ್ಯರು, ಇದೀಗ ಬ್ಲ್ಯಾಕ್ ಫಂಗಸ್ನಿಂದ ಕಂಗೆಟ್ಟಿದ್ದಾರೆ. ಕೋವಿಡ್ ಸೋಂಕಿನಿಂದ ರೋಗನಿರೋಧಕ ಶಕ್ತಿ ಕಳೆದುಕೊಂಡವರೇ ಬ್ಲ್ಯಾಕ್ ಫಂಗಸ್ಗೆ ಟಾರ್ಗೆಟ್ ಆಗ್ತಿದ್ದಾರೆ.
ಬ್ಲ್ಯಾಕ್ ಫಂಗಸ್ಗೆ ಸಿಲಿಕಾನ್ ಸಿಟಿಯಲ್ಲಿ ಇಬ್ಬರು ಬಲಿ - black fungus death toll in Bangalore news
ಕೊರೊನಾದಿಂದ ಬಸವಳದಿದ್ದ ಸಿಲಿಕಾನ್ ಸಿಟಿ ಜನತೆಗೆ ಇದೀಗ ಬ್ಲ್ಯಾಕ್ ಫಂಗಸ್ ಆತಂಕ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಬ್ಲ್ಯಾಕ್ ಫಂಗಸ್ಗೆ ಇಬ್ಬರು ಬಲಿಯಾಗಿದ್ದಾರೆ.
![ಬ್ಲ್ಯಾಕ್ ಫಂಗಸ್ಗೆ ಸಿಲಿಕಾನ್ ಸಿಟಿಯಲ್ಲಿ ಇಬ್ಬರು ಬಲಿ Two dead for black fungus in Bangalore](https://etvbharatimages.akamaized.net/etvbharat/prod-images/768-512-11776706-thumbnail-3x2-dd.jpg)
ಬ್ಲಾಕ್ ಫಂಗಸ್ಗೆ ಸಿಲಿಕಾನ್ ಸಿಟಿಯಲ್ಲಿ ಇಬ್ಬರು ಬಲಿ
ಇದೀಗ ಬೆಂಗಳೂರಿನಲ್ಲಿ ಬ್ಲ್ಯಾಕ್ ಫಂಗಸ್ಗೆ ಇಬ್ಬರು ಬಲಿಯಾಗಿದ್ದಾರೆ. 64 ವರ್ಷದ ವೃದ್ಧ ಹಾಗೂ 57 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ಚಿಕ್ಕಪೇಟೆ ಹಾಗೂ ಕೊಟಾಲಂ ನಿವಾಸಿಯಾಗಿರುವ ಇಬ್ಬರು ಡಯಾಲಿಸಿಸ್ ಪಡೆಯುತ್ತಿದ್ದರು. ಒಬ್ಬರು ಬಾತ್ ರೂಂನಲ್ಲಿ ಬಿದ್ದಿದ್ದರು. ಈ ಸಮಯದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಇರುವುದು ಕಂಡು ಬಂದಿತ್ತು. ಇನ್ನೊಬ್ಬರಿಗೆ ಕೋವಿಡ್ ಪಾಸಿಟಿವ್ ಇನ್ವೇಸಿವ್ ಆಗಿ ಮೃತಪಟ್ಟಿದ್ದಾರೆ.