ಕರ್ನಾಟಕ

karnataka

ETV Bharat / state

ಎರಡು ದಿನ ನೆರೆ ಪೀಡಿತ ಜಿಲ್ಲೆಗಳಿಗೆ ನೂತನ ಸಚಿವರಿಂದ ಪ್ರವಾಸ: ಸಂಪುಟ ನಿರ್ಧಾರ

ನೂತನ ಸಚಿವರ ಜತೆ ಸಂಪುಟ ಸಭೆ ನಡೆಸಿದ ಸಿಎಂ ಯಡಿಯೂರಪ್ಪ, ಅತಿವೃಷ್ಟಿಯ ಪೀಡಿತ ಜಿಲ್ಲೆಗಳಿಗೆ ನೂತನ ಸಚಿವರುಗಳು ಭೇಟಿ ನೀಡಿ, ನೆರೆ ಸಂತ್ರಸ್ತರ ಅಹವಾಲು ಸ್ವೀಕರಿಸುವಂತೆ ನಿರ್ದೇಶನ ನೀಡಿದ್ದಾರೆ.

ಎರಡು ದಿನ ನೆರೆ ಪೀಡಿತ ಜಿಲ್ಲೆಗಳಿಗೆ ನೂತನ ಸಚಿವರಿಂದ ಪ್ರವಾಸ

By

Published : Aug 20, 2019, 8:35 PM IST

ಬೆಂಗಳೂರು: ನೂತನ ಸಚಿವರುಗಳು ಎರಡು ದಿನಗಳ ಕಾಲ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ನೂತನ ಸಚಿವರ ಜತೆ ಸಂಪುಟ ಸಭೆ ನಡೆಸಿದ ಸಿಎಂ ಯಡಿಯೂರಪ್ಪ, ಅತಿವೃಷ್ಟಿ ಪೀಡಿತ ಜಿಲ್ಲೆಗಳಿಗೆ ನೂತನ ಸಚಿವರುಗಳು ಭೇಟಿ ನೀಡಿ, ನೆರೆ ಸಂತ್ರಸ್ತರ ಅಹವಾಲು ಸ್ವೀಕರಿಸುವಂತೆ ನಿರ್ದೇಶನ ನೀಡಿದ್ರು.

ಸಂಪು ಸಭೆ ಬಳಿಕ ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ನೂತನ ಸಚಿವರಾದ ಮಾಧುಸ್ವಾಮಿ ಹಾಗೂ ಸುರೇಶ್ ಕುಮಾರ್, ನೆರೆ ಪೀಡಿತ ಜಿಲ್ಲೆಗಳಿಗೆ ನೂತನ ಸಚಿವರು ಭೇಟಿ ನೀಡಿ, ಪರಿಹಾರ ಕಾಮಗಾರಿಗಳ ಪರಿಶೀಲನೆ ನಡೆಸಿ, ಸಂತ್ರಸ್ತರ ಕೊಂದುಕೊರತೆಗಳನ್ನು ಆಲಿಸುವಂತೆ ಸಿಎಂ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.

ಐದು ಲಕ್ಷ ಕೊಟ್ಟರೂ ಕೂಡಲೇ ಮನೆ ನಿರ್ಮಾಣ ಮಾಡಲು ಆಗಲ್ಲ. ಪರಿಸ್ಥಿತಿ ಅವಲೋಕನ ಮಾಡಿ ಪರಿಹಾರ ಕಾರ್ಯಕ್ರಮಗಳ ಬಗ್ಗೆ ತೀರ್ಮಾನಿಸುತ್ತೇವೆ. ಕೇಂದ್ರ ಸರ್ಕಾರದ ಮೇಲೆ ನಿರೀಕ್ಷೆ ಇದ್ದು, ಮೋದಿಯವರು ಆದಷ್ಟು ಬೇಗ ಪರಿಹಾರ ನೀಡುತ್ತಾರೆ ವಿಶ್ವಾಸ ವ್ಯಕ್ತಪಡಿಸಿದ್ರು.

ಯಾವ ಸಚಿವರು ಯಾವ ಜಿಲ್ಲೆ?

ಗದಗ, ಕೊಪ್ಪಳ- ಸಚಿವ ಸಿ.ಸಿ. ಪಾಟೀಲ್

ಬಳ್ಳಾರಿ , ರಾಯಚೂರು - ಸಚಿವ ಶ್ರೀರಾಮುಲು

ಕೊಡಗು - ಸಚಿವ ಸುರೇಶ್ ಕುಮಾರ್

ಮೈಸೂರು- ಸಚಿವ ಆರ್​. ಅಶೋಕ್

ಚಾಮರಾಜನಗರ- ಸಚಿವ ವಿ. ಸೋಮಣ್ಣ

ದಕ್ಷಿಣ ಕನ್ನಡ, ಉಡುಪಿ - ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಬೆಳಗಾವಿ - ಲಕ್ಷ್ಮಣ್ ಸವಧಿ

ಚಿಕ್ಕೋಡಿ - ಶಶಿಕಲಾ ಜೊಲ್ಲೆ

ಬಾಗಲಕೋಟೆ - ಕೆ.ಎಸ್. ಈಶ್ವರಪ್ಪ

ವಿಜಯಪುರ - ಗೋವಿಂದ ಕಾರಜೋಳ

ಹಾವೇರಿ - ಬಸವರಾಜ್ ಬೊಮ್ಮಾಯಿ

ಧಾರವಾಡ, ಉತ್ತರ ಕನ್ನಡ - ಜಗದೀಶ್ ಶೆಟ್ಟರ್

ಯಾದಗಿರಿ - ಶ್ರೀರಾಮುಲು, ಪ್ರಭು ಚೌಹಾಣ್

ಚಿಕ್ಕಮಗಳೂರು, ಹಾಸನ - ಸಿಟಿ ರವಿ, ಮಾಧುಸ್ವಾಮಿ

ABOUT THE AUTHOR

...view details