ಕರ್ನಾಟಕ

karnataka

ETV Bharat / state

ಶೋ ರೂಂಗೆ ನುಗ್ಗಿ 32 ಲಕ್ಷ ರೂ. ಮೌಲ್ಯದ ಎರಡು ಕಾರು ಕದ್ದ ಖದೀಮರು! - stolen by thieves worth Rs 32 lakhs

ಕಳ್ಳರು ಒಳ ನುಗ್ಗಿ 13 ಲಕ್ಷ ರೂ. ಮೌಲ್ಯದ 1 ಕಾರು ಹಾಗೂ 19 ಲಕ್ಷ ರೂ. ಮೊತ್ತದ ಮತ್ತೊಂದು ಕಾರನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ. ಇದಾದ ಬಳಿಕ ಸೆಕ್ಯೂರಿಟಿ ಗಾರ್ಡ್ ಇಸ್ರೇಲ್ ಎಂಬಾತ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಯಲಹಂಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಶೋ ರೂಂ
ಶೋ ರೂಂ

By

Published : Feb 24, 2021, 8:27 PM IST

ಬೆಂಗಳೂರು: ‌ಯಲಹಂಕದ ಕೋಗಿಲು ರಸ್ತೆಯಲ್ಲಿರುವ ಕಾರ್​ ಶೋ‌ ರೂಂನಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್​ಗೆ ಚಾಕು ತೋರಿಸಿ 32 ಲಕ್ಷದ ರೂ. ಮೌಲ್ಯದ ಕಿಯಾ ಕಂಪನಿಯ ಎರಡು ಕಾರುಗಳನ್ನು ಕಳ್ಳತನ ಮಾಡಿದ್ದಾರೆ.

ಕಿಯಾ ಕಂಪನಿಯ ಶೋ ರೂಂನಲ್ಲಿ ಇಂದು ಬೆಳಗ್ಗೆ ಕೃತ್ಯ ನಡೆದಿದೆ‌‌. ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ಇಸ್ರೇಲ್ ಎಂಬುವರು‌ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಬೆಳಗ್ಗೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ದರೋಡೆಕೋರರು ಶೋ ರೂಂಗೆ ನುಗ್ಗಿ ಇಸ್ರೇಲ್‌ಗೆ ಚಾಕು ತೋರಿಸಿ ಶೋ ರೂಂ ಕೀ ಕೊಡುವಂತೆ ಬೆದರಿಸಿದ್ದಾರೆ.

ಆತಂಕಗೊಂಡ ಇಸ್ರೇಲ್ ಕೀಯನ್ನು ದರೋಡೆಕೋರರಿಗೆ ನೀಡಿದ್ದ. ಬಳಿಕ ಒಳ ನುಗ್ಗಿ 13 ಲಕ್ಷ ರೂ. ಮೌಲ್ಯದ 1 ಕಾರು ಹಾಗೂ 19 ಲಕ್ಷ ರೂ. ಮೊತ್ತದ ಮತ್ತೊಂದು ಕಾರನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ. ಇದಾದ ಬಳಿಕ ಸೆಕ್ಯೂರಿಟಿ ಗಾರ್ಡ್ ಇಸ್ರೇಲ್, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಯಲಹಂಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಶೋ ರೂಂ ಪಕ್ಕದಲ್ಲಿದ್ದ ಸಿಸಿಟಿವಿ ಕ್ಯಾಮರಾಗಳಲ್ಲಿ ದರೋಡೆಕೋರರ ಕೃತ್ಯ ಸೆರೆಯಾಗಿದ್ದು, ಶೋ ರೂಂ ಬಗ್ಗೆ ಮೊದಲೇ ತಿಳಿದುಕೊಂಡು ಸಂಚು ರೂಪಿಸಿ ಕೃತ್ಯ ಎಸಗಿರುವ ಸಾಧ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ‌.

ABOUT THE AUTHOR

...view details