ಕರ್ನಾಟಕ

karnataka

ETV Bharat / state

ಒಂದೇ ದಿನ ಜೋಡಿ ಕಟ್ಟಡಗಳು ನೆಲಸಮ: ಮನೆಗಳಲ್ಲಿದ್ದ ವಸ್ತುಗಳನ್ನು ಕಳೆದುಕೊಂಡವರು ಕಂಗಾಲು - building collapse in bengaluru

ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಜೋಡಿ ಕಟ್ಟಡ ಧರೆಗುರುಳಿವೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಕಮಲಾನಗರದ ಎನ್​ಜಿಒ ಕಾಲೋನಿಯಲ್ಲಿದ್ದ 3 ಅಂತಸ್ತಿನ ಕಟ್ಟಡದ ಒಂದು ಭಾಗ ಹಾಗೂ ಎರಡಂತಸ್ತಿನ ಕಟ್ಟಡದ ಹಿಂಭಾಗ ಏಕಾಏಕಿ ಕುಸಿದಿದೆ. ಈ ಕಟ್ಟಡದಲ್ಲಿ ವಾಸವಿದ್ದ ಜನರೆಲ್ಲಾ ಮನೆ ವಸ್ತುಗಳನ್ನೆಲ್ಲಾ ಕಳೆದುಕೊಂಡು ಕಂಗಾಲಾಗಿದ್ದಾರೆ.

two building collapses in bengaluru
ಜೋಡಿ ಕಟ್ಟಡಗಳು ನೆಲಸಮ

By

Published : Oct 13, 2021, 8:48 PM IST

ಬೆಂಗಳೂರು:ಒಂದೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆ, ಇನ್ನೊಂದೆಡೆ ಅಪಾಯದ ಅಂಚಿನಲ್ಲಿದ್ದ, ಶಿಥಿಲಗೊಂಡಿದ್ದ ಕಟ್ಟಡಗಳೆಲ್ಲ ಒಂದೊಂದಾಗೇ ನೆಲಕಚ್ಚುತ್ತಿರುವ ಘಟನೆಗಳು ಒಂದರ ಮೇಲೊಂದು ಘಟಿಸುತ್ತಲೇ ಇವೆ. ಹೀಗಿದ್ದರೂ ಮಹಾಲಕ್ಷ್ಮಿ ಲೇಔಟ್​​ನ ಕಮಲಾನಗರದಲ್ಲಿ ಶಿಥಿಲಗೊಂಡಿದ್ದ ಎರಡು ಕಟ್ಟಡದಲ್ಲಿ ನಿನ್ನೆಯವರೆಗೂ ವಾಸವಾಗಿದ್ದ ಜನ ಇಂದು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಜೋಡಿ ಕಟ್ಟಡಗಳು ನೆಲಸಮ

ನಿನ್ನೆ ರಾತ್ರಿ ಹತ್ತು ಗಂಟೆ ವೇಳೆಗೆ ತಳಪಾಯ ಕುಸಿದಿದ್ದು, ಬಿಬಿಎಂಪಿಯೇ ಇಂದು ಎರಡೂ ಕಟ್ಟಡಗಳನ್ನು ನೆಲಸಮಗೊಳಿಸಿದೆ. ಒಂದು ವರ್ಷದಿಂದ ಕಟ್ಟಡದಲ್ಲಿ ವಾಸ ಮಾಡದಂತೆ ಬಿಬಿಎಂಪಿ ನೋಟಿಸ್ ನೀಡಿದ್ದರೂ, ಲೀಸ್ ಹಣ ಅಂತ ಲಕ್ಷ ಲಕ್ಷ ಹಣ ಓನರ್ ಕೈಗಿಟ್ಟಿದೇವಲ್ಲ ಮನೆ ಬಿಟ್ಟು ಹೋಗೋದು ಹೇಗೆ ಅಂತ ಲೆಕ್ಕಾಚಾರ ಹಾಕಿ ಇಲ್ಲೇ ವಾಸ ಇದ್ರು. ಇನ್ನೊಂದೆಡೆ ಓನರ್ ಸಾಕಷ್ಟು ಸಾಲ ಮಾಡಿ, ತಲೆಮರೆಸಿಕೊಂಡಿದ್ದ, ಹೀಗಾಗಿ ಈ ಕಟ್ಟಡದ ಜಾಗವನ್ನು ಸಿಂಡಿಕೇಟ್ ಮುಟ್ಟುಗೋಲು ಹಾಕಿತ್ತು.

ಮಣ್ಣು ಪಾಲಾದ ಬೆಲೆಬಾಳುವ ಸಾಮಗ್ರಿಗಳು

ಒಂದು ಕಡೆ ಧರೆಗುರುಳಿದ ಮೂರಂತಸ್ಥಿನ ಮನೆ.ಇನ್ನೊಂದು ಕಡೆ ಬೆಲೆಬಾಳುವ ಮನೆ ಸಾಮಾನುಗಳು ಮಣ್ಣಲ್ಲಿ ಮಣ್ಣಾಯ್ತಲ್ಲ ಅಂತ ಕಣ್ಣೀರಿಡ್ತಿರೋ ಮಂದಿ.. ಅತ್ತ ಆ ಮನೆ ಹೋಗೋದ್ರ ಜೊತೆಗೆ ನಮ್ಮ ಪುಟ್ಟ ಬಿಡಾರವನ್ನೂ ನುಂಗಿಕೊಂಡು ಹೋಯ್ತಲ್ಲ ಅಂತ ಎದೆ ಎದೆ ಚೆಚ್ಚಿಕೊಳ್ತಿರೋ ಮಹಿಳೆಯರು. ಇದೆಲ್ಲಾ ಘಟನೆಗೆ ಸಾಕ್ಷಿಯಾಗಿದ್ದು, ಕಮಲಾನಗರದ ಮನೆ ಕುಸಿತ ಪ್ರಕರಣ.

ಧರೆಗುರುಳಿದ ಜೋಡಿ ಕಟ್ಟಡ

ನಗರದಲ್ಲಿ ಮತ್ತೊಂದು ಬೃಹತ್ ಜೋಡಿ ಕಟ್ಟಡ ಧರೆಗುರುಳಿವೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಕಮಲಾನಗರದ ಎನ್​ಜಿಒ ಕಾಲೋನಿಯಲ್ಲಿದ್ದ 3 ಅಂತಸ್ಥಿನ ಕಟ್ಟಡದ ಒಂದು ಭಾಗ ಹಾಗೂ ಎರಡಂತಸ್ಥಿನ ಕಟ್ಟಡದ ಹಿಂಭಾಗ ಏಕಾಏಕಿ ಕುಸಿದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮನೆಮಂದಿಯನ್ನೆಲ್ಲ ಹೊರಗೆ ಕಳುಹಿಸಿ ಸುತ್ತಮುತ್ತಲಿನ ಮನೆಯವರನ್ನೂ ಖಾಲಿ ಮಾಡಿಸಿದ್ದಾರೆ.

ಬಳಿಕ ಇಂದು ಬೆಳಗ್ಗೆ ಸ್ಥಳೀಯ ಶಾಸಕರು ಹಾಗೂ ಸಚಿವರಾದ ಗೋಪಾಲಯ್ಯ ನೇತೃತ್ವದಲ್ಲಿ ಮನೆ ತೆರವು ಕಾರ್ಯಾಚರಣೆ ನಡೆಸಲಾಯ್ತು. ಹಿಟಾಚಿ ಬಳಸಿ ಇಡೀ ಮನೆಯನ್ನ ಉರುಳಿಸಲಾಯ್ತು, ಎರಡೂ ಕಟ್ಟಡಗಳನ್ನ ಉರುಳಿಸಲಾಯ್ತು.

ಇನ್ನು ಮನೆ ಅಪಾಯದ ಅಂಚಿನಲ್ಲಿದ್ದ ಕಾರಣ ಮನೆ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನ ಹೊರ ತೆಗೆಯೋದಕ್ಕೂ ಪೊಲೀಸರು ಅವಕಾಶ ಕಲ್ಪಿಸಲಿಲ್ಲ. ಕಟ್ಟಡದ ಫೌಂಡೇಷನ್ ಕುಸಿದಿರೋ ಕಾರಣ ಯಾವಾಗ ಬೇಕಾದ್ರೂ ಇಡೀ ಕಟ್ಟಡವೇ ನೆಲಕ್ಕಪ್ಪಳಿಸೋ ಸಾಧ್ಯತೆ ಇದೆ ಎಂದು ಯಾರಿಗೂ ಮನೆ ಒಳಗೆ ಬಿಡದೇ ನಿರ್ಬಂಧಿಸಿದ್ರು.

ಹೀಗಾಗಿ ಕಷ್ಟಪಟ್ಟು ಸಂಪಾದಿಸಿದ್ದ ಟಿವಿ, ಪ್ರಿಡ್ಜ್, ಪಾತ್ರೆ ಪಗಡಿ, ಒಡವೆ ವಸ್ತ್ರ ಎಲ್ಲ ಕಟ್ಟಡದ ಜೊತೆ ನೆಲಸಮವಾಯ್ತು. ಹೀಗಾಗಿ ಮನೆ ಮಂದಿಯಲ್ಲಾ ಕಣ್ಣೀರಲ್ಲಿ ಕೈತೊಳೆದ್ರು. ಇನ್ನು ಮನೆ ತೆರವಿನ ವೇಳೆ ಪಕ್ಕದಲ್ಲೇ ಇದ್ದ ಚಿಕ್ಕ ಸೀಟಿನ ಮನೆಯೂ ಧರೆಗುರುಳಿತು. ಇದರಿಂದ ಆ ಮನೆ ಮಾಲೀಕರು ಪಾಲಿಕೆಗೆ ಹಾಗೂ ಪೊಲೀಸರಿಗೆ ಹಿಡಿಶಾಪ ಹಾಕಿದ್ರು.ಪಾಲಿಕೆ ಸರಿಯಾದ ಕ್ರಮದಲ್ಲಿ ತೆರವು ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ್ರು.

ಮನೆ ಮಾಲೀಕರ ಬೇಜವಾಬ್ದಾರಿಗೆ ಆಕ್ರೋಶ

ಇನ್ನು ಇಷ್ಟೆಲ್ಲಾ ಘಟನೆಗೆ ಪಾಲಿಕೆ ನಿರ್ಲಕ್ಷ್ಯ ಜೊತೆಗೆ ಮನೆ ಮಾಲೀಕರ ಬೇಜವಾಬ್ದಾರಿತನ ಕಾರಣ ಎನ್ನಲಾಗ್ತಿದೆ. ರಾಜೇಶ್ವರಿ ಎಂಬುವವರಿಗೆ ಸೇರಿದ ಈ ಮನೆ ಅಪಾಯದಂಚಿನಲ್ಲಿದೆ ಎಂದು ಬಿಬಿಎಂಪಿ ಈಗಾಗಲೇ ನೋಟಿಸ್ ಸಹ ನೀಡಿತ್ತು. ಆದರೆ ಮನೆ ಬೋಗ್ಯಕ್ಕೆ ಹಾಕಿಕೊಂಡವ್ರಿಗೆ ಮನೆ ಒಡತಿ ಬೋಗ್ಯದ ಹಣ ಹಿಂತಿರುಗಿಸದೇ ಇರೋ ಕಾರಣ ಅವರೆಲ್ಲ ಮನೆ ಖಾಲಿಮಾಡದೇ ಅಲ್ಲೇ ವಾಸವಿದ್ರು ಎನ್ನಲಾಗಿದೆ.

ಇನ್ನು ಮನೆ ಮೇಲೆ ಸದ್ಯ ಸಾಲ ಪಡೆದಿದ್ದ ರಾಜೇಶ್ವರಿ ಸಾಲಕಟ್ಟದ ಕಾರಣ ಮನೆಯನ್ನು ಬ್ಯಾಂಕ್ ಸೀಜ್ ಮಾಡಿತ್ತು.. ಸದ್ಯ ಮನೆ ಮಾರಿ ಸೆಟೆಲ್ಮೆಂಟ್ ಮಾಡೋ ನಿರೀಕ್ಷೆಯಲ್ಲಿದ್ದ ರಾಜೇಶ್ವರಿಗೆ ಕಟ್ಟಡ ಕುಸಿತ ದೊಡ್ಡ ಶಾಕ್ ನೀಡಿದೆ.

ಇನ್ನು ನಗರದಲ್ಲಿ ಮೇಲಿಂದ ಮೇಲೆ ಕಟ್ಟಡ ಧರೆಗುರುಳುತ್ತಿರೋ ಹಿನ್ನೆಲೆ ಕಟ್ಟಡಗಳ ರ್ಯಾಪಿಡ್ ಸರ್ವೆಗೆ ಬಿಬಿಎಂಪಿ ಮುಂದಾಗಿದೆ. ಈಗಾಗಲೇ ನಗರದಲ್ಲಿ 300 ಅಪಾಯದಂಚಿನಲ್ಲಿರೋ ಕಟ್ಟಡಗಳನ್ನ ಗುರುತಿಸಿರೋ ಪಾಲಿಕೆ ಶೀಘ್ರದಲ್ಲೇ ತೆರವು ಕಾರ್ಯಾಚರಣೆ ಕೈಗೊಳ್ಳೋಕೆ ತೀರ್ಮಾನಿಸಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

ABOUT THE AUTHOR

...view details