ಕರ್ನಾಟಕ

karnataka

ETV Bharat / state

ಗಲಭೆ: ಪೊಲೀಸರಿಂದ ಇಬ್ಬರು ಪಾಲಿಕೆ ಸದಸ್ಯರ​​ ವಿಚಾರಣೆ ಸಾಧ್ಯತೆ - akhanda Srinivasa Murthy

ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಡಿ.ಜೆ.ಹಳ್ಳಿ ವಾರ್ಡ್ ಕಾರ್ಪೊರೇಟರ್​ ಸಂಪತ್ ರಾಜ್ ಹಾಗೂ ಪುಲಿಕೇಶಿ ನಗರ ವಾರ್ಡ್​ ಸದಸ್ಯ ಜಾಕೀರ್ ಅವರನ್ನು ಗೃಹ ಸಚಿವ ಬೊಮ್ಮಾಯಿಯವರ ಅನುಮತಿ ಪಡೆದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎಂಬ ಮಾಹಿತಿ ಪೊಲೀಸ್ ಉನ್ನತ ಮೂಲಗಳಿಂದ ಲಭ್ಯವಾಗಿದೆ.

Bengaluru riots: Two corporates likely to be questioned by police
ಬೆಂಗಳೂರು ಗಲಭೆ ಪ್ರರಕಣ: ಪೊಲೀಸರಿಂದ ಇಬ್ಬರು ಕಾರ್ಪೋರೇಟರ್ಸ್ ವಿಚಾರಣೆ ಸಾಧ್ಯತೆ

By

Published : Aug 14, 2020, 3:30 PM IST

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣ ರಾಜಕೀಯ ಆಯಾಮದಲ್ಲಿ ಸಾಗುತ್ತಿರುವ ಕಾರಣ ಸದ್ಯ ಪ್ರಕರಣದಲ್ಲಿ ಇಬ್ಬರು ಕಾರ್ಪೊರೇಟರ್‌ಗಳ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.

ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಡಿ.ಜೆ.ಹಳ್ಳಿ ವಾರ್ಡ್ ಕಾರ್ಪೊರೇಟರ್ ಸಂಪತ್ ರಾಜ್ ಹಾಗೂ ಪುಲಿಕೇಶಿ ನಗರ ವಾರ್ಡ್​ ಸದಸ್ಯ ಜಾಕೀರ್ ಅವರನ್ನು ಗೃಹ ಸಚಿವ ಬೊಮ್ಮಾಯಿ ಅನುಮತಿ ಪಡೆದು ವಿಚಾರಣೆ ನಡೆಸಲಿದ್ದಾರೆ ಎಂಬ ಮಾಹಿತಿ ಪೊಲೀಸ್ ಉನ್ನತ ಮೂಲಗಳಿಂದ ದೊರೆತಿದೆ.

ಸದ್ಯ ಕಾರ್ಪೊರೇಟರ್​​ಗಳು ಘಟನೆಯಲ್ಲಿ‌ ತಮ್ಮದೇನೂ ಪಾತ್ರವಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ಘಟನೆ ಕಾರ್ಪೊರೇಟರ್​ಗಳ ವ್ಯಾಪ್ತಿಯಲ್ಲಿ ನಡೆದಿರುವ ಕಾರಣ ಅವರಿಂದಲೂ ಮಾಹಿತಿ ಪಡೆಯಲಿದ್ದಾರೆ.

ಅಖಂಡ ಶ್ರೀನಿವಾಸ್ ಹಾಗೆಯೇ ಈಗಾಗಲೇ ಬಂಧಿತ ಆರೋಪಿ ಮುಜಾಮಿಲ್ ಪಾಷಾ ಹಾಗೂ ಇತರರು ಯಾವ ರೀತಿ ಪರಿಚಯವಿದ್ದರು ಎನ್ನುವ ಮಾಹಿತಿ ಪಡೆದುಕೊಳ್ಳಲಿದ್ದಾರೆ.

ABOUT THE AUTHOR

...view details