ಬೆಂಗಳೂರು: ಚಿಕನ್ ರೋಲ್ ಕೊಟ್ಟಿಲ್ಲ ಎಂದು ಹೋಟೆಲ್ ಹುಡುಗರಿದ್ದ ರೂಂಗೆ ಬೆಂಕಿ ಇಟ್ಟಿರುವ ಆರೋಪದಡಿ ಇಬ್ಬರನ್ನು ಹನುಮಂತ ನಗರ ಪೊಲೀಸರು ಬಂಧಿಸಿದ್ದಾರೆ.
ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿರುವ ಕುಮಾರ್ ಹೋಟೆಲ್ಗೆ ನಿನ್ನೆ ತಡರಾತ್ರಿ ಚಿಕನ್ ರೋಲ್ಗೆ ಎಂದು ದೇವರಾಜ್ ಮತ್ತು ಆತನ ಸಂಗಡಿಗರು ಬಂದಿದ್ದಾರೆ. ಹೊಟೇಲ್ ಮುಚ್ಚುವ ಸಮಯವಾಗಿದ್ದರಿಂದ ಚಿಕನ್ ರೋಲ್ ಇಲ್ಲ. ಈಗಾಗಲೇ ಲೇಟ್ ಆಗಿದೆ. ಅಂಗಡಿ ಕ್ಲೋಸ್ ಮಾಡುತ್ತಿದ್ದೇವೆ ಎಂದು ಹೊಟೇಲ್ ಸಿಬ್ಬಂದಿ ಹೇಳಿದ್ದಾನೆ.
ಇದರಿಂದ ಕುಪಿತಗೊಂಡ ದೇವರಾಜ್ ಮತ್ತು ಸಹಚರರು ಹೋಟೆಲ್ ಸಿಬ್ಬಂದಿ ಜೊತೆ ಗಲಾಟೆ ಮಾಡಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ಮೂವರನ್ನು ಹೋಟೆಲ್ ಸಿಬ್ಬಂದಿ ಥಳಿಸಿ ಕಳುಹಿಸಿದ್ದಾರೆ. ಏಟು ತಿಂದ ಬಳಿಕ ದೇವರಾಜ್ ಟೀಂ ದೇವೇಗೌಡ ಪೆಟ್ರೋಲ್ ಬಂಕ್ಗೆ ತೆರಳಿ, ಅಲ್ಲಿಂದ ಎರಡು ಲೀಟರ್ ಪೆಟ್ರೋಲ್ ಖರೀದಿಸಿದ್ದಾರೆ.