ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಆಂಬರ್ ಗ್ರೀಸ್ ಮಾರಾಟಕ್ಕೆ ಯತ್ನಿಸಿದ ಇಬ್ಬರ ಬಂಧನ - ಬೆಂಗಳೂರು ಆಂಬರ್ ಗ್ರೀಸ್ ಪ್ರಕರಣ

ಕೋಟ್ಯಾಂತರ ಬೆಲೆಬಾಳುವ ಆಂಬರ್ ಗ್ರೀಸ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

two-arrested-for-selling-ambergris-at-bengaluru
ಆಂಬರ್ ಗ್ರೀಸ್ ಮಾರಾಟಕ್ಕೆ ಯತ್ನಿಸಿದ ಇಬ್ಬರ ಬಂಧನ

By

Published : Jan 28, 2022, 3:46 AM IST

ಬೆಂಗಳೂರು:ನಗರದ ಬನಶಂಕರಿ ಬನಗಿರಿ ಬಳಿ ಆಂಬರ್ ಗ್ರೀಸ್ (ತಿಮಿಂಗಲ ವಾಂತಿ) ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು 3 ಕೆಜಿ 600 ಗ್ರಾಂ ತೂಕದ ಅಂಬರ್ ಗ್ರೀಸ್‌ ವಶಕ್ಕೆ ಪಡೆದಿದ್ದಾರೆ.

ಬನಶಂಕರಿ 2ನೇ ಹಂತದ ನಿವಾಸಿಗಳಾದ ಮೊಹಮ್ಮದ್ ರಿಯಾಜ್ ಅಹಮ್ಮದ್ (58) ಹಾಗೂ ಮೊಹಮ್ಮದ್ ಗೌಸ್ (51) ಬಂಧಿತ ಆರೋಪಿಗಳು. ಇವರಿಂದ ಕೋಟ್ಯಾಂತರ ಬೆಲೆಬಾಳುವ 3 ಕೆಜಿ 600 ಗ್ರಾಂ ತೂಕದ ಅಂಬರ್‌ ಗ್ರೀಸ್ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಜನವರಿ 26ರಂದು ದಕ್ಷಿಣ ಪೊಲೀಸ್ ವಿಭಾಗ ವ್ಯಾಪ್ತಿಯ ಬನಶಂಕರಿ 3ನೇ ಹಂತದ ಬನಗಿರಿ ನಗರದಲ್ಲಿ ಆರೋಪಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಂಬರ್‌ ಗ್ರೀಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.

ಹೊರ ರಾಜ್ಯಗಳಿಂದ ಅಂಬರ್‌ ಗ್ರೀಸ್‌ ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡಲು ಗಿರಾಕಿಗಳನ್ನು ಹುಡುಕುತ್ತಿದ್ದೆವು ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ರಾಶಿ ಯಂತ್ರ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ: ಕೂಲಿಕಾರ ಮಹಿಳೆ ಸಾವು, ಇಬ್ಬರಿಗೆ ಗಾಯ

ABOUT THE AUTHOR

...view details