ಬೆಂಗಳೂರು: ರಾಜ್ಯ ಸರ್ಕಾರದ ಐರಾವತ ಯೋಜನೆಯಡಿ ವಾಹನ ಸಬ್ಸಿಡಿ ನೀಡಲು ಲಂಚ ಪಡೆಯುತ್ತಿದ್ದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ಮ್ಯಾನೇಜರ್ ಹಾಗೂ ಮಧ್ಯವರ್ತಿ ಸೇರಿ ಇಬ್ಬರು ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ವಾಹನ ಸಬ್ಸಿಡಿ ನೀಡಲು ಲಂಚ: ಇಬ್ಬರು ಎಸಿಬಿ ಬಲೆಗೆ! - bengaluru latest crime news
ಐರಾವತ ಯೋಜನೆಯಡಿ ವಾಹನ ಸಬ್ಸಿಡಿ ನೀಡಲು ಲಂಚ ಪಡೆಯುತ್ತಿದ್ದ ಡಿಸ್ಟ್ರಿಕ್ ಮ್ಯಾನೇಜರ್ ಸೇರಿ ಇಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಸರೋಜಾದೇವಿ ಎಸಿಬಿ ಬಲೆಗೆ ಬಿದ್ದ ಡಿಸ್ಟಿಕ್ ಮ್ಯಾನೇಜರ್. ಮಧ್ಯವರ್ತಿ ಹನುಮಂತು ಎಂಬುವರನ್ನು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇಂದು ರಾಜಾಜಿನಗರದಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರೋಜಾ ದೇವಿಯು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗೆ ಕಾರು ಖರೀದಿಸಲು ಸಬ್ಸಿಡಿ ನೀಡಲಾಗುವ ಸರ್ಕಾರದ ಐರಾವತ ಯೋಜನೆ ಅರ್ಜಿಯನ್ನು ಅನುಮೋದಿಸಲು ಸಾಧ್ಯವಿಲ್ಲ. ಯಾಕೆಂದರೆ ಸರ್ಕಾರದ ಖಜಾನೆಯಲ್ಲಿ ಯೋಜನೆಗೆ ಹಣವಿಲ್ಲದ ಕಾರಣ ಯೋಜನೆಯಡಿ ಸಲ್ಲಿಸಿದ್ದ ಎಲ್ಲಾ ಅರ್ಜಿಗಳು ರಿಜೆಕ್ಟ್ ಆಗಿವೆ. ಹೆಚ್ಚುವರಿಯಾಗಿ ಹಣ ಕೊಟ್ಟರೆ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಈ ಸಂಬಂಧ ಮಧ್ಯವರ್ತಿ ಹನುಮಂತುನನ್ನು ಭೇಟಿಯಾಗುವಂತೆಯೂ ಅರ್ಜಿದಾರರಿಗೆ ಸೂಚಿಸಿದ್ದರು.
ಇದರನ್ವಯ ಭೇಟಿ ಮಾಡಿ 30 ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟು ಅಂತಿಮವಾಗಿ 20 ಸಾವಿರ ರೂ.ಲಂಚವನ್ನು ಸರೋಜದೇವಿ ಪರವಾಗಿ ಸ್ವೀಕರಿಸುವಾಗ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.ಈತ ನೀಡಿದ ಮಾಹಿತಿ ಮೇರೆಗೆ ಸರೋಜಾದೇವಿಯನ್ನು ವಶಕ್ಕೆ ಪಡೆದುಕೊಂಡು 1 ಲಕ್ಷ ರೂ.ನಗದು ಜಪ್ತಿ ಮಾಡಿ ಎಸಿಬಿ ಅಧಿಕಾರಿಗಳು ವಿಚಾರಣೆ ಎಸಿಬಿ ಮುಂದುವರೆಸಿದ್ದಾರೆ.